ಜಿಲ್ಲೆ

ಸೋಡಾ ಬಾಟಲಿಯಿಂದ ಇರಿತ

Mangaluru - Nishantha Narayana

ಪುತ್ತೂರು: ಬೊಳುವಾರಿನಲ್ಲಿ ಬುಧವಾರ ತಡ ರಾತ್ರಿ ಇತ್ತಂಡಗಳ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ ವ್ಯಕ್ತಿಯೊಬ್ಬರಿಗೆ ಸೋಡಾ ಬಾಟಲಿಯಿಂದ ಚುಚ್ಚಿದ್ದಾರೆ.

ಉಮೇಶ್ ಬಾಳುಗೋಡು ಎಂಬುವರು ದೂರು ನೀಡಿದ್ದು, ಪುತ್ತೂರು ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ತಿಂಗಳಾಡಿ ನಿವಾಸಿ ನರ್ಮೇಶ್ ರೈ, ಪ್ರಸಾದ್ ಕೃತ್ಯ ಎಸಗಿದವರೆಂದು ದೂರುನಲ್ಲಿ ಹೇಳಲಾಗಿದೆ. ನರ್ಮೇಶ್ ರೈ ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ ಹಿನ್ನೆಲೆ ಹೊಂದಿದ್ದಾನೆ.

ಅಮಲು ಪದಾರ್ಥ ಸೇವನೆಯ ಮತ್ತಿನಲ್ಲಿ ಜಗಳವಾಡಿದ್ದು, ಈ ವೇಳೆ ಇದು ತಾರಕಕ್ಕೆ ಹೋಗಿ ಉಮೇಶ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.