ಜಿಲ್ಲೆ

ನೀಲಗಿರಿ ತೋಪಲ್ಲಿ ಎಟಿಎಂ ಮಷಿನ್!

ಆನೇಕಲ್:ಎಟಿಎಂ ಮಷಿನ್ ದೋಚಿ ಹಣ ಹೊರ ತೆಗೆಯಲು ಯತ್ನಿಸುತ್ತಿದ್ದ ಖದೀಮರು ಸಾರ್ವಜನಿಕರು ಬರುವ ಶಬ್ದ ಕೇಳಿ ಮಷಿನ್ ಬಿಟ್ಟು ಪರಾರಿಯಾಗಿದ್ದಾರೆ.

ಮಂಚನಹಳ್ಳಿ ಬಳಿ ಇದ್ದ ಕೆನರಾ ಬ್ಯಾಂಕ್ ಎಟಿಎಂ ಮಷಿನ್ ಅನ್ನು ಸೋಮವಾರ ಬೆಳಗ್ಗಿನ ಜಾವ 3.30ರ ಸುಮಾರಿನಲ್ಲಿ ಕದ್ದು, ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಸುತ್ತಿಗೆ ಮೂಲಕ ಒಡೆದು ಹಣ ತೆಗೆಯಲು ಯತ್ನಿಸುತ್ತಿದ್ದಾಗ ರಸ್ತೆಯಲ್ಲಿ ಜನ ಓಡಾಡುತ್ತಿರುವ ಶಬ್ದ ಕೇಳಿಸಿದೆ. ಈ ವೇಳೆ ಸ್ಥಳಕ್ಕೆ ಹೋಗಿ ನೋಡಿದಾಗ ಟಾಟಾ ಏಸ್ ವಾಹನದಲ್ಲಿ ಬಂದ ಇಬ್ಬರು ಎಟಿಎಂ ಮಷಿನ್ ಮೂಲಕ ಹಣ ಹೊರತೆಗೆಯಲು ಯತ್ನಿಸುತ್ತಿರುವುದು ಗೊತ್ತಾಗಿದೆ.

ಜನರನ್ನು ನೋಡುತ್ತಿದ್ದಂತೆ ಮಷಿನ್ ಬಿಟ್ಟು ಇಬ್ಬರು ವಾಹನದ ಸಮೇತ ಕಾಲ್ಕಿತ್ತಿದ್ದಾರೆ.

ಸುಮಾರು 10 ಲಕ್ಷ ರೂಪಾಯಿ ಎಟಿಎಂ ಮಷಿನ್‌ನಲ್ಲಿತ್ತು. ಅತ್ತಿಬೆಲೆ ಪೊಲೀಸರು ಎಟಿಎಂ ಮಷಿನ್ ವಶಕ್ಕೆ ಪಡೆದಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.