ಜಿಲ್ಲೆ

ಎಟಿಎಂನಲ್ಲಿ ಹಣ ಏಕೆ ಡ್ರಾ ಆಗುತ್ತಿಲ್ಲ ನೋಡಿ ಎಂದ ವೃದ್ಧನಿಗೆ ಮಹಿಳೆಯಿಂದ 1.66 ಲಕ್ಷ ರೂ. ಮೋಸ

Haveri - Kariyappa Aralikatti

ಬ್ಯಾಡಗಿ: ಎಟಿಎಂನಲ್ಲಿ ಹಣ ಏಕೆ ಡ್ರಾ ಆಗುತ್ತಿಲ್ಲ ನೋಡಿ ಎಂದ ವೃದ್ಧನ ಖಾತೆಯಿಂದ ಮಹಿಳೆಯೊಬ್ಬಳು 1.66 ಲಕ್ಷ ರೂ. ಡ್ರಾ ಮಾಡಿಕೊಂಡು ಮೋಸ ಮಾಡಿದ ಘಟನೆ ಕುರಿತು ಗುರುವಾರ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಕಲ್ಲೇದೇವರ ಸೇವಾನಗರ ತಾಂಡಾದ ಪುಟ್ಟಪ್ಪ ನೂರೇಪ್ಪ ಲಮಾಣಿ (65) ಮೋಸ ಹೋದ ವೃದ್ಧ.
ಈತ ಜುಲೈ 7ರಂದು ಪಟ್ಟಣದ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಹೋಗಿದ್ದ. ಆದರೆ, ಎಟಿಎಂನಿಂದ ಹಣ ಬಾರದ ಕಾರಣ ಹಿಂದೆ ನಿಂತಿದ್ದ ಅಪರಿಚಿತ ಮಹಿಳೆಗೆ ಕೇಳಿದ್ದಾನೆ. ಆಕೆ ವೃದ್ಧನ ಬಳಿಯಿದ್ದ ಎಟಿಎಂ ಕಾರ್ಡ್ ಹಾಗೂ ಪಾಸ್‌ವರ್ಡ್ ತೆಗೆದುಕೊಂಡು ಯಾಕೋ ಹಣ ಬರುತ್ತಿಲ್ಲ. ಬ್ಯಾಂಕ್‌ನಲ್ಲಿ ವಿಚಾರಿಸಿ ಅಂತಾ ಹೇಳಿ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ವೃದ್ಧನನ್ನು ವಾಪಸ್ ಕಳುಹಿಸಿದ್ದಳು.
ಇದಾದ ಬಳಿಕ ಜುಲೈ 31ರವರೆಗೆ ಮಹಿಳೆಯರು ವಿವಿಧ ಎಟಿಎಂನಲ್ಲಿ ಒಟ್ಟು 1.66 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾಳೆ. ವೃದ್ಧ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಈ ಹಣ ಡ್ರಾ ಮಾಡಿಕೊಂಡ ವಿಚಾರ ತಿಳಿದು ಬಂದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.