ಮಡಿಕೇರಿ:
'ಚೆಟ್ಟಳ್ಳಿ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಏನೋ ಸಮಸ್ಯೆ ಆಗಿದೆ. ಕೂಡಲೇ ಗಮನಹರಿಸಿ' ಇಂಥದ್ದೊAದು ತುರ್ತು ಸಂದೇಶ ಬುಧವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಂನಿAದ ಚೆಟ್ಟಳ್ಳಿ ಪೊಲೀಸ್ ಉಪ ಠಾಣೆಗೆ ಬಂತು. ಕಳ್ಳರು ನುಗ್ಗಿರಬಹುದೇನೋ ಎನ್ನುವ ಗುಮಾನಿಯಲ್ಲಿ ಎಎಸ್‌ಐ ದಿನೇಶ್ ಮತ್ತು ಸಿಬ್ಬಂದಿ ದಡಬಡಾಯಿಸಿ ಎಟಿಎಂ ಕಡೆಗೆ ದೌಡಾಯಿಸಿದರು.
ಮೇಲ್ನೋಟಕ್ಕೆ ಪರಿಶೀಲಿಸಿದಾಗ ಯಾವುದೇ ವ್ಯತ್ಯಾಸಗಳು ಅಲ್ಲಿ ಕಂಡು ಬರಲಿಲ್ಲ. ಮತ್ತಷ್ಟು ಸೂಕ್ಷö್ಮವಾಗಿ ನೋಡಿದಾಗ ದೊಡ್ಡ ಗಾತ್ರದ ಕಪ್ಪಗಿನ ಹುಳವೊಂದು ಎಟಿಎಂ ಬಾಗಿಲು ಬಳಿ ರಂದ್ರ ಮಾಡಿ ಒಳ ನುಗ್ಗುವ ಪ್ರಯತ್ನ ನಡೆಸಿತ್ತು. ಹುಳುವಿನ ಚಲನವಲನ ದಾಖಲಿಸಿಕೊಂಡ ಸಿಸಿಟಿವಿ ಕ್ಯಾಮೆರಾ ಅಪಾಯದ ಸಂದೇಶವನ್ನು ಕೇಂದ್ರ ಕಚೇರಿಗೆ ಕಳುಹಿಸಿದೆ. ಅಲ್ಲಿಂದ ಪೊಲೀಸ್ ಕಂಟ್ರೋಲ್ ರೂಂ ಮುಖಾಂತರ ಚೆಟ್ಟಳ್ಳಿ ಪೊಲೀಸರಿಗೆ ರವಾನೆ ಆಗಿದೆ. ಕೊನೆಗೆ ಪೊಲೀಸರು ಹುಳುವನ್ನು ಹೊರತೆಗೆದು ನಿಟ್ಟುಸಿರು ಬಿಟ್ಟರು.
ಚೆಟ್ಟಳ್ಳಿಯ ಕೆನರಾ ಬ್ಯಾಂಕ್ ಎಟಿಎಂ ಕಾರ್ಯನಿರ್ವಹಿಸದೇ ಸುಮಾರು ಆರು ತಿಂಗಳುಗಳೇ ಕಳೆದಿತು. ವಾರದ ಹಿಂದೆಯಷ್ಟೇ ನೂತನ ಎಟಿಯಂ ಯಂತ್ರ ಅಳವಡಿಸಿದ್ದರು. ಅದರೆ ವಿದ್ಯುತ್ ವ್ಯತ್ಯಯದಿಂದ ಎಂಟಿಎA ಮತ್ತೆ ರಿಪೇರಿ ಆಗಿತ್ತು. ಎರಡು ದಿನಗಳ ಹಿಂದೆ ದುರಸ್ಥಿಗೊಂಡಿದ್ದ ಈ ಎಟಿಎಂ ಹುಳುವಿನ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದೆ.