ಮಂಗಳೂರು: ಪೋಷಕರಿಗೆ ಸರಿಯಾದ ಸಲಹೆ, ಮಾರ್ಗದರ್ಶನ ನೀಡಿದರೆ ಆಟಿಸಂ ಮಕ್ಕಳು ಯಶಸ್ವಿ ವೃತ್ತಿ ಜೀವನ ಹಾಗೂ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ.ಕಿರಣ್ ಕುಮಾರ್ ಹೇಳಿದರು.
ಆಟಿಸಂ ಜಾಗೃತಿ ದಿನದ ಅಂಗವಾಗಿ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯಲ್ಲಿ ಮಂಗಳೂರು ತಾಲೂಕಿನ ಆರೋಗ್ಯ ಮತು ್ತ ಕುಟುಂಬ ಕಲ್ಯಾಣ ಇಲಾಖಾಯಲ್ಲಿ ಸೇವಾ ನಿರತ ಆಶಾ ಕಾರ್ಯಕರ್ತೆಯರಿಗಾಗಿ ಒಂದು ದಿನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಖಜಾಂಚಿ ಜಗದೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಕೆ., ನಿರ್ದೇಶಕರಾದ ಉಷಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ಬೆಳವಣಿಗೆ ಹಂತದಲ್ಲಿ ಆಟಿಸಂ ಮಗುವಿನ ಗುಣಲಕ್ಷಣಗಳು, ಶೀಘ್ರ ಪತ್ತೆ ಹಚ್ಚುವಿಕೆಯ ಪ್ರಾಮುಖ್ಯತೆ ಬಗ್ಗೆ ಮೀನಾಕ್ಷಿ ಎಂ.ಕೆ., ಆಟಿಸಂ ವ್ಯಕ್ತಿಗಳ ಸಾಧನೆಗಳ ಬಗ್ಗೆ ಡಾ.ವಸಂತ ಕುಮಾರ್ ಶೆಟ್ಟಿ, ಆಟಿಸಂ ಮಗುವಿನ ವರ್ತನೆಯ ಮಾರ್ಪಾಡು ಹಾಗೂ ಸುಧಾರಣಾ ತಂತ್ರಗಳ ಬಗ್ಗೆ ಗ್ರೇಸಿ ಬ್ರಗಾಂಝ, ಆಟಿಸಂ ಮಗುವಿನ ಕಲಿಕೆಗೆ ಪೂರಕ ಚಟುವಟಿಕೆಗಳ ಬಗ್ಗೆ ಸೋಫಿಯಾ ಡಿಸೋಜ ವಿವರಿಸಿದರು.
ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ಸ್ವಾಗತಿಸಿದರು. ಮಹಾಬಲ ಮಾರ್ಲ ವಂದಿಸಿದರು. ವಿಶೇಷ ಶಿಕ್ಷಕಿ ಸ್ಮಿತಾ ಯು. ಕಾರ್ಯಕ್ರಮ ನಿರೂಪಿಸಿದರು.