???????????????????????????????????? 
ಜಿಲ್ಲೆ

ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರು ವಿವಿ ತಂಡ ಭಾಗಿ

reportermys

ಮೈಸೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜ.4 ರಿಂದ 7 ರವರೆಗೆ ನಡೆಯಲಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರು ವಿವಿ ತಂಡ ಭಾಗವಹಿಸಿದೆ.


ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ವಿದ್ಯಾಶ್ರಮ ಕಾಲೇಜಿನ ಮಹಮ್ಮದ್ ಸಕ್ಲೆನ್ ಅಹಮದ್(ನಾಯಕ), ಎಸ್. ಆರ್.ರಾಹುಲ್ ಕಶ್ಯಪ್, ಮನುಷ್, ಕ್ರೆಸ್ಟಾ ಕಾಲೇಜಿನ ದೀಪಾಂಕ್ ಜಾದವ್, ಬಿ.ಸೋಮಾನಿ ಕಾಲೇಜಿನ ಪಿ.ಮಣಿಕಂಠ, ರಾಥೋಡ್ ಲೋಕೇಶ್, ಮಹಾರಾಜ ಕಾಲೇಜಿನ ಮಯೂರ ಎಸ್.ರಾಜ್, ಹಾಸನ ಸರ್ಕಾರಿ ಕಾಲೇಜಿನ ಬಾಲಕೃಷ್ಣ, ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಜಿ.ಸಿ.ಗುರುಪ್ರಸಾದ್ ಆಯ್ಕೆಯಾಗಿದ್ದಾರೆ.

ತರಬೇತುದಾರ ಟಿ.ಎಸ್.ರವಿ, ವ್ಯವಸ್ಥಾಪಕ ಲೋಕೇಶ್ ಜತೆ ತಮ್ಮ ತಂಡ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.