ಜಿಲ್ಲೆ

ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್; ಬೆಳಗಾವಿ ಬಾಲಕಿಯರ ತಂಡಕ್ಕೆ ಅಗ್ರಸ್ಥಾನ

ಧಾರವಾಡ: ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘಗಳ ಆಶ್ರಯದಲ್ಲಿ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕೂಟದಲ್ಲಿ ಬೆಳಗಾವಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಟಗಾರ್ತಿಯರು ಪಾರಮ್ಯ ಮೆರೆದಿದ್ದಾರೆ.
ಬೆಳಗಾವಿ ತಂಡ ಬಾಲಕಿಯರು 2 ಚಿನ್ನ ಮತ್ತು 3 ಬೆಳ್ಳಿ ಪದಕಗಳಿಗೆ ಕೊರಳೊಡ್ಡಿ 24 ಅಂಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಾಲಕಿಯರ ತಂಡ ತಲಾ 2 ಚಿನ್ನ, ಬೆಳ್ಳಿ, ಕಂಚಿನ ಪದಕಗಳೊಂದಿಗೆ 19 ಅಂಕ, ಉಡುಪಿ ಜಿಲ್ಲಾ ತಂಡ 2 ಚಿನ್ನ ಮತ್ತು 4 ಕಂಚಿನ ಪದಕಗಳೊಂದಿಗೆ 14 ಅಂಕ ಗಳಿಸಿದರು.
ಬೆಂಗಳೂರು ಉತ್ತರ ಜಲ್ಲೆ ತಂಡ 1 ಚಿನ್ನ, 2 ಬೆಳ್ಳಿ, 1 ಕಂಚಿನ ಪದಕ, ಶಿವಮೊಗ್ಗ ತಲಾ 1 ಚಿನ್ನ, ಬೆಳ್ಳಿ, ಕಂಚು, ಧಾರವಾಡ ಜಿಲ್ಲೆ 1 ಚಿನ್ನ, 1 ಬೆಳ್ಳಿ, ಮೈಸೂರು 1 ಚಿನ್ನ, ಬೆಂಗಳೂರು ದಕ್ಷಿಣ 1 ಬೆಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ 1 ಕಂಚು ಹಾಗೂ ಬಾಗಲಕೋಟೆ ಜಿಲ್ಲೆಯ ತಂಡದವರು 1 ಕಂಚಿನ ಪಡೆದರು.

* ಪಲಿತಾಂಶ: (ಅನುಕ್ರಮ ಸ್ಥಾನ)
* 100 ಮೀ. ಓಟ: ಸ್ತುತಿ ಶೆಟ್ಟಿ- ಉಡುಪಿ, ವೈಭವಿ ಬುದ್ರೂಕ್- ಬೆಳಗಾವಿ, ಪ್ರಿಯಾ ಕೆ.- ಬೆಂಗಳೂರು ಉತ್ತರ.
* 100 ಮೀ. ಅಡೆತಡೆ ಓಟ: ಅಪೂರ್ವಾ ನಾಯ್ಕ- ಬೆಳಗಾವಿ, ಇಶಾ ಎಲಿಜಬೆತ್- ಬೆಂಗಳೂರು ದಕ್ಷಿಣ, ಗೌರಂಗಿಗೌಡ- ಶಿವಮೊಗ್ಗ.
* 3,000 ಮೀ. ಓಟ: ಶ್ರೀರಕ್ಷಾ- ಬೆಂಗಳೂರು ಉತ್ತರ, ಪ್ರಣತಿ- ಬೆಂಗಳೂರು ಉತ್ತರ, ಮಹಾಲಕ್ಷ್ಮೀ ಬಸಕಳಿ- ಬಾಗಲಕೋಟೆ.
* 400 ಮೀ. ಓಟ: ರೀತುಶ್ರೀ- ದಕ್ಷಿಣ ಕನ್ನಡ, ಅಭಿಜ್ಞಾ- ಶಿವಮೊಗ್ಗ, ಅರ್ನಿಕಾ ವರ್ಷಾ ಡಿಸೋಜಾ- ಉಡುಪಿ.
* 800 ಮೀ. ಓಟ: ಪ್ರಿಯಾಂಕಾ ಓಲೇಕಾರ- ಧಾರವಾಡ, ಶಿಲ್ಪಾ ಹೊಸಮನಿ- ಧಾರವಾಡ, ಚೈತ್ರಾ ಟಿ.ಪಿ.- ದಕ್ಷಿಣ ಕನ್ನಡ.
* ಡಿಸ್ಕಸ್ ಎಸೆತ: ಮಾಧುರ್ಯ- ಉಡುಪಿ, ಐಶ್ವರ್ಯಾ ಬೆಂಡಿಗೇರಿ- ದಕ್ಷಿಣ ಕನ್ನಡ, ದೇವಿಕಾ ರಾವ್- ಉಡುಪಿ.
* ಎತ್ತರ ಜಿಗಿತ: ಗೌತಮಿ ಗೌಡ- ಶಿವಮೊಗ್ಗ, ಅಮೃತಾ ಕೆ.- ದಕ್ಷಿಣ ಕನ್ನಡ, ಸುಧೀಕ್ಷಾ ಕಾಮತ್- ಉಡುಪಿ.
* ಉದ್ದಜಿಗಿತ: ಲಕ್ಷಾೃ- ಮೈಸೂರು, ಸ್ಮಿತಾ ಕಾಕತಕರ- ಬೆಳಗಾವಿ, ನಿತ್ಯಶ್ರೀ ವಿ.- ಬೆಂಗಳೂರು ಗ್ರಾಮಾಂತರ.
* ಗುಂಡುಎಸೆತ: ಐಶ್ವರ್ಯಾ ಬೆಂಡಿಗೇರಿ- ದಕ್ಷಿಣ ಕನ್ನಡ, ಶಿಾ ತಹಸೀಲ್ದಾರ- ಬೆಳಗಾವಿ, ಮಾಧುರ್ಯ- ಉಡುಪಿ.
* 4*400 ರಿಲೇ: ಬೆಳಗಾವಿಯ ವೈಭವಿ ಬುದ್ರೂಕ್, ಅಪೂರ್ವ ನಾಯ್ಕ, ಅದಿತಿ ಗಡಕರಿ, ಸ್ಮಿತಾ ಕಾಕತಕರ- ಪ್ರಥಮ, ಬೆಂಗಳೂರು ಉತ್ತರ ಜಿಲ್ಲೆಯ ಪ್ರಿಯಾ ಕೆ., ರಕ್ಷಿತಾ ಕಂದಾಚಾರಿ, ದೀಕ್ಷಾ ಡಿ., ಮಾನ್ಯ ದ್ವಿತೀಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೊಬಿನಾ ಜಾಯ್, ರೀತುಶ್ರೀ, ಅನಘಾ ಕೆ.ಎ., ರೇಖಾ ತೃತೀಯ, ಉಡುಪಿ ಜಿಲ್ಲೆಯ ಸ್ತುತಿ ಶೆಟ್ಟಿ, ಅಕ್ಷತಾ ಎಲ್., ಸವಿತಾ ಎಂ., ದಾನಮ್ಮ ಪೂಜಾರಿ ಚತುರ್ಥ ಸ್ಥಾನ ಪಡೆದರು.