ಜಿಲ್ಲೆ

ಕ್ರೀಡಾ ಚಟುವಟಿಕೆಗಳಿಂದ ಮಾನಸಿಕ ಒತ್ತಡ ದೂರ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡಾ ಚಟುವಟಿಕೆಗಳಿಂದ ಮಾನಸಿಕ ಒತ್ತಡದಿಂದ ಹೊರಬರಬಹುದು. ಖಿನ್ನತೆಯನ್ನು ದೂರವಿಡಬಹುದು. ಕ್ರೀಡೆಗಳು ದೇಹಕ್ಕೆ ವ್ಯಾಯಾಮವನ್ನು ನೀಡುತ್ತವೆ. ಇದರಿಂದ ಜೀವನವು ಆಹ್ಲಾದಕರವಾಗಿರುತ್ತದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಹಾಗೂ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಮಹಾವಿದ್ಯಾಲಯದ ಆಶ್ರಮದಲ್ಲಿ 2024- 25ನೇ ಸಾಲಿನ ಶಹರ ಮಟ್ಟದ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸುರೇಶ ಕೆ.ಪಿ. ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದರು.0
ಅAತಾರಾಷ್ಟಿçÃಯ ಕ್ರೀಡಾಪಟು ಬಾಲಕೃಷ್ಣ ಅವಲಕ್ಕಿ ಪ್ರತಿಜ್ಞಾವಿಽ ಬೋಽಸಿದರು. ಯು.ಎನ್. ಹಜಾರೆ, ವಿ.ಎಚ್. ಕಲಾದಗಿ, ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ಇತರರಿದ್ದರು.
ಪ್ರಾಚಾರ್ಯ ರವಿವರ್ಮ ಜೋಶಿ ಸ್ವಾಗತಿಸಿದರು. ಪಲ್ಲವಿ ಪಾಟೀಲ ಹಾಗೂ ಸಂಗಡಿಗರು ಸ್ವಾಗತಿಗೀತೆ ಹಾಡಿದರು. ಪವನ ಗೊರವರ ವಂದಿಸಿದರು. ಡಾ. ಎಸ್.ಕೆ. ನಡುವಿನಕೇರಿ ನಿರೂಪಿಸಿದರು.