ಯಕ್ಕಂಚಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ$್ಮಣ ಸವದಿ ಚಾಲನೆ ನೀಡಿದರು. ಶಿವಾನಂದ ಕೊಲ್ಲಾಪುರ, ತುಕಾರಾಮ ಗೊಂದಳಿ, ಬಸಪ್ಪ ಹೊಕ್ಕೂಂಡಿ, ಅಪ್ಪಣ್ಣ ಐಗಳಿ ಇತರರಿದ್ದರು. 
ಜಿಲ್ಲೆ

ಅಥಣಿ ಕ್ಷೇತ್ರ ಮಾದರಿ ಮಾಡಲು ಸವದಿ ಭರವಸೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ ಗ್ರಾಮೀಣ: ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಥಣಿ ೇತ್ರದಲ್ಲಿ ನನೆಗುದಿಗೆ ಬಿದ್ದ ಕಾಮಗಾರಿ ಕೈಗೊಳ್ಳುವ ಜತೆಗೆ ರಾಜ್ಯದಲ್ಲಿಯೇ ಮಾದರಿ ೇತ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ಲಕ್ಷ$್ಮಣ ಸವದಿ ಭರವಸೆ ನೀಡಿದರು.

ಅಥಣಿ ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಸೋಮವಾರ ನರೇಗಾ ಯೋಜನೆಯಡಿ ಮಂಜೂರಾದ 40 ಲ ರೂ. ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ನೀರಾವರಿ, ಕೆರೆ ತುಂಬುವ ಯೋಜನೆ, ಶುದ್ಧ ಕುಡಿಯುವ ನೀರು, ಶಾಲಾ ಕೊಠಡಿಗಳು, ಸಮುದಾಯ ಭವನ ಸೇರಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ರೈತರ ಮಕ್ಕಳ ಶಿಣಕ್ಕಾಗಿ ಕೃಷಿ ಮಹಾವಿದ್ಯಾಲಯ ಕಾಮಗಾರಿಗೆ ಪ್ರಾರಂಭಿಸಲಾಗುವುದು ಎಂದರು.

ತಾಪಂ ಇಒ ಶಿವಾನಂದ ಕೊಲ್ಲಾಪುರ, ಪಿಡಿಒ ಬಸವರಾಜ ಹೊನಕಾಂಬಳೆ, ಕಾರ್ಯದರ್ಶಿ ಶ್ರೀಕಾಂತ ಕೆಂಚಣ್ಣವರ, ತುಕಾರಾಮ ಗೊಂದಳಿ, ಬಸಪ್ಪ ಪೂಜಾರಿ, ಬಸಪ್ಪ ಹೊಕ್ಕೂಂಡಿ, ಅಪ್ಪಣ್ಣ ಐಗಳಿ, ದುರ್ಗಪ್ಪ ಗೊಂದಳಿ ಇತರರಿದ್ದರು.