ಜಿಲ್ಲೆ

ಕುಸುಮಾಗೆ ಉಡಿ ತುಂಬಿದ ಕಾರ್ಯಕರ್ತೆಯರು; ಆರ್​ಆರ್​ ನಗರದಲ್ಲಿ ಮತ ಎಣಿಕೆಯ ಗಡಿಬಿಡಿ...

ಬೆಂಗಳೂರು: ಭಾರಿ ಹಣಾಹಣಿಯ ಕಣವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಈಗಾಗಲೇ ಆರಂಭವಾಗಿದ್ದು, ಪೋಸ್ಟಲ್ ಮತ ಎಣಿಕೆ ಮುಕ್ತಾಯಗೊಂಡಿದೆ.

ಇವಿಎಂ ಮತ ಎಣಿಕೆ ಆರಂಭವಾಗಿದ್ದು, 25 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಸದ್ಯದ ಎಣಿಕೆಯಲ್ಲಿ ಬಿಜೆಪಿಯ ಮುನಿರತ್ನ- 253, ಕಾಂಗ್ರೆಸ್​​ನ ಕುಸುಮಾ-116, ಜೆಡಿಎಸ್​ನ ಕೃಷ್ಣಮೂರ್ತಿ- 34 ಮತಗಳನ್ನು ಪಡೆದಿದ್ದು, ಎಣಿಕೆ ಚುರುಕಿನೊಂದಿಗೆ ಮುಂದುವರಿದಿದ್ದು ಕುತೂಹಲ ಕೆರಳಿಸಿದೆ.

ಮತ ಎಣಿಕೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತೆಯರು ಅಭ್ಯರ್ಥಿ ಕುಸುಮಾ ಉಡಿ ತುಂಬಿ ಶುಭ ಕೋರಿ ಗೆಲುವನ್ನು ಹಾರೈಸಿದರು.