ಬಳ್ಳಾರಿಯಲ್ಲಿ ಡಿಎಚ್‌ಒ ಡಾ.ರಮೇಶ ಬಾಬುಗೆ ಕಟ್ಟಡ ಕಾರ್ಮಿಕ ಸಂಘಟನೆ, ಪ್ರಾಂತ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಿಡಬ್ಲ್ಯುಎಫ್‌ಐ ತಾಲೂಕು ಅಧ್ಯಕ್ಷ ವಿ.ದೇವಣ್ಣ, ಜಿಲ್ಲಾ ಸಮಿತಿ ಸದಸ್ಯ ಕೆ.ದೇವಣ್ಣ, ಮಹಿಳಾ ಕಾರ್ಮಿಕರಾದ ಕೆ.ಕರಿಬಸಮ್ಮ, ಕೆ.ರಂಗಮ್ಮ ಇತರರಿದ್ದರು. 
ಜಿಲ್ಲೆ

ಕುರೇಕುಪ್ಪದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿ

ಸಂಡೂರು: ತಾಲೂಕಿನ ಕುರೇಕುಪ್ಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು ಒತ್ತಾಯಿಸಿ ಡಿಎಚ್‌ಒ ಡಾ.ರಮೇಶ ಬಾಬುಗೆ ಕಟ್ಟಡ ಕಾರ್ಮಿಕ ಸಂಘಟನೆ, ಪ್ರಾಂತ ರೈತ ಸಂಘದಿಂದ ಬುಧವಾರ ಬಳ್ಳಾರಿಯಲ್ಲಿ ಮನವಿ ಸಲ್ಲಿಸಲಾಯಿತು. ತಾಲೂಕು ಕಾರ್ಮಿಕ ಸಂಘಟನೆ ಅಧ್ಯಕ್ಷ ವಿ.ದೇವಣ್ಣ ಮಾತನಾಡಿ, ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬಡ ಜನರು ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸಾವಿರಾರು ಬಡ ರೋಗಿಗಳು, ಗರ್ಭಿಣಿಯರು ಚಿಕಿತ್ಸೆ ಪಡೆಯಲು ಸಾಲುಗಟ್ಟಿ ನಿಲ್ಲಬೇಕಾಗುತ್ತಿದೆ. ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರ, ಬಳ್ಳಾರಿ ಒಪಿಡಿಯಲ್ಲಿ ಚಿಕಿತ್ಸೆ ಪಡೆಯಲು ಪರದಾಡುವಂತಾಗಿದೆ. ಆದ್ದರಿಂದ ಕುರೇಕುಪ್ಪದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.