ಜಿಲ್ಲೆ

ವಿವಿಧೆಡೆ ಸಂಭ್ರಮದ ರಂಜಾನ್​

ಎಂ.ಎಸ್​.ಹಿರೇಮಠ ಬೆಳಗಾವಿ

ಕಕ್ಕೇರಿ: ಖಾನಾಪುರ ತಾಲೂಕಿನ ಕಕ್ಕೇರಿ, ಲಿಂಗನಮಠ, ಚುಂಚವಾಡ, ರಾಮಾಪುರ, ಗುಂಡಳ್ಳಿ, ಭೂರನಕಿ, ದಡ್ಡಿ, ಗೋಳಿಹಳ್ಳಿ, ಬೀಡಿ, ನಂದಗಡ ಸೇರಿ ವಿವಿಧ ಗ್ರಾಮಗಳಲ್ಲಿ ಸೋಮವಾರ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ರಂಜಾನ್​ ಹಬ್ಬ ಆಚರಿಸಿದರು.

ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದರು. ರಾಜ್ಯ ಅಲ್ಪಸಂಖ್ಯಾತರ ಟಕದ ಉಪಾಧ್ಯ ರಿಯಾಜಮ್ಮದ್​ ಪಟೇಲ್​, ಇಸ್ಲಾಂ ಧರ್ಮದ ಮುಖಂಡರಾದ ಅಷ್ಪಕ್​ ಅಹಮ್ಮದ್​ ಪಟೇಲ್​, ಇಲಿಯಾಸ್​ ಪಟೇಲ್​, ಆಜಾದ್​ ಪಟೇಲ್​, ಜಕ್ಕಿಅಮ್ಮದ್​ ರಾಯಚೂರು, ಅಸ್ಲಾಂ ಪಟೇಲ್​, ಡಾ. ನಜೀರ್​ ವೀರಾಪುರ, ಡಾ.ಎಚ್​.ಎಚ್​. ಚೌಧರಿ, ಇಂತಿಯಾಜ್​ ಜುಂಜವಾಡ, ದೀಲಾವರ್​ ಮುಜಾವರ್​, ಹಾಜಿ ಮಸ್ತಾನ್​ ಮುಲ್ಲಾ, ದಾದಾಪೀರ್​ ಕಿತ್ತೂರ, ಅಷ್ಪಕ್​ ಬಾಗವಾನ್​, ಆಜಾದ್​ ಸೌದಾಗರ್​, ಹಾಶಿಮ್​ ಜಮಾದಾರ, ಾರೂಕ್​ ಮುಜಾವರ್​, ಜೆಲಾನಿ ಮುಜಾವರ, ಸುಬಾನಿ ಸಿಲ್ಲೆದಾರ್​, ಗುಡುಸಾಬ್​ ಕೊಟೂರ್​, ಹನ್​ೀ ಕುದುರಿ ಇತರರಿದ್ದರು.