ಬೆಳಗಾವಿ ಅನ್ನೋತ್ಸವದಲ್ಲಿ ಬುಧವಾರ ನಡೆದ ಬೂಗೀ ವೂಗೀ ನೃತ್ಯ ತಂಡ. 
ಜಿಲ್ಲೆ

ಅನ್ನೋತ್ಸವದಲ್ಲಿ ಗಮನ ಸೆಳೆದ ನೃತ್ಯ, ಶಕ್ತಿ ಪ್ರದರ್ಶನ

ಶಂಕರ ಗೆಜ್ಜಿ

ಬೆಳಗಾವಿ: ಅನ್ನೋತ್ಸವದಲ್ಲಿ ಬುಧವಾರ ನಡೆದ ಬೂಗೀ ವೂಗೀ ಗುಂಪು ನೃತ್ಯ ಸ್ಪರ್ಧೆ ಮತ್ತು ಶಕ್ತಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ವಿ.ಕೆ ಸ್ಟೈಲ್ ಅವರ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಥಮ ಬಹುಮಾನ, ಆರ್‌ಎನ್‌ವಿ ಡ್ಯಾನ್ಸ್ ಕ್ರೂಗೆ ದ್ವಿತೀಯ ಬಹುಮಾನ ನೀಡಲಾಯಿತು. ಬೂಗೀ ಮ್ಯಾನಿಯಕ್ ಮತ್ತು ಅಭಿನಯ್ ಡ್ಯಾನ್ಸ್ ಅಕಾಡೆಮಿ ತೃತೀಯ ಬಹುಮಾನ ಹಂಚಿಕೊಂಡವು.

ಸ್ಪರ್ಧೆಯಲ್ಲಿ ಭಾಗವಹಿಸಿದ 5 ರಿಂದ 25 ವರ್ಷ ವಯಸ್ಸಿನವರು, ಶಾಸ್ತ್ರೀಯ ನೃತ್ಯದಿಂದ ಹಿಪ್-ಹಾಪ್‌ವರೆಗೆ ವಿವಿಧ ನೃತ್ಯ ಶೈಲಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ತೀರ್ಪುಗಾರರ ಸಮಿತಿಯು ನೃತ್ಯ ಸಂಯೋಜನೆ, ತಾಂತ್ರಿಕತೆ ಮತ್ತು ಸೃಜನಶೀಲತೆ ಮೇಲೆ ಮೌಲ್ಯಮಾಪನ ಮಾಡಿದರು. ಕಥಕ್ ಕಲಾವಿದೆ, ನೃತ್ಯ ಸಂಯೋಜಕಿ ಅನುಜಾ ಕ್ಷೀರಸಾಗರ, ಫರ್ಹಾನ್ಸ್ ಡ್ಯಾನ್ಸ್ ಮತ್ತು ಏರೋಬಿಕ್ಸ್‌ನ ಮಾಲೀಕ ಫರ್ಹಾನ್ ಸೈಯದ್, ಪ್ರಸಿದ್ಧ ನೃತ್ಯ ಸಂಯೋಜಕ ಶಾಕೀಬ್ ತೀರ್ಪುಗಾರರಾಗಿದ್ದರು.

ಎಸ್ಪಿ ಡಾ. ಭೀಮಾಶಂಕರ ಗುಳೇದ, ಸಂಕಲ್ಪ ಜಗದೀಶ ಶೆಟ್ಟರ್, ಶ್ರದ್ಧಾ ಶೆಟ್ಟರ್ ಉಪಸ್ಥಿತರಿದ್ದು ಅನ್ನೋತ್ಸವಕ್ಕೆ ಶುಭ ಹಾರೈಸಿದರು. ಜ.10ರಂದು ಸಂಜೆ ಸೂಫಿ ಸಂಗೀತದ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.