ಜಿಲ್ಲೆ

ಜ್ಯೋತಿಷ ಶಾಸ್ತ್ರ ಪ್ರಾಚಿನ ಶಾಸ್ತ್ರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಜ್ಯೋತಿಷ ಶಾಸ್ತ್ರ ಅತ್ಯಂತ ಪ್ರಾಚಿನ ಶಾಸ್ತ್ರ. ವೈಜ್ಞಾನಿಕವಾಗಿ ಅದು ಇಂದಿಗೂ ಪ್ರಸ್ತುತವಿದೆ. ಹೀಗೆ ಅನೇಕ ಶಾಸ್ತ್ರಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕಿದೆ ಎಂದು ವಿದ್ವಾಂಸ ಪಂ. ಮಧುಸೂದನ ಶಾಸ್ತ್ರಿ ಹೇಳಿದರು.
ನಗರದ ಶ್ರೀಮದ್​ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜ್ಯೋತಿಷ ತರಗತಿಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರ ಶಾಸ್ತ್ರಿ ಮಾತನಾಡಿ, ಜ್ಯೋತಿಷ ಶಾಸ್ತ್ರ ಹಾಗೂ ಪಂಚಾಂಗದ ಕುರಿತು ಮಾಹಿತಿ ನೀಡಿದ ಅವರು, ಈ ಎರಡೂ ವಿಷಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದರು.
ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಕಾರ್ಯದರ್ಶಿ ಡಾ. ಆನಂದ ಹಂದಿಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಯೋತಿಷ ತರಗತಿಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಅನೇಕ ಜ್ಯೋತಿಷ್ಯರು ಆಸಕ್ತಿಯಿಂದ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ತರಗತಿಗಳನ್ನು ನಡೆಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಮಹಾದೇವಿ ದೊಡ್ಡಮನಿ ನಿರೂಪಿಸಿದರು.