ಕಳಸ: ಇಂದು ಜ್ಯೋತಿಷ್ಯ ಒಂದು ವ್ಯಾಪಾರವಾಗಿದೆ. ಶಾಸ ,ಬದ್ದವಾಗಿಲ್ಲದೆ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಯೋಗ ಧ್ಯಾನ ಮತ್ತು ಮಾತು ಮಂಥನದ ಮೂರನೇ ದಿನದ ಕಾರ್ಯಕ್ರಮದಲ್ಲಿ ಯೋಗದಲ್ಲಿ ಧ್ಯಾನ ಮತ್ತು ಜ್ಯೋತಿಷ್ಯ ಕುರಿತು ಉಪನ್ಯಾಸ ನೀಡಿದರು.
ಹಿಂದಿನ ಕಾಲದಲ್ಲಿ ಜ್ಯೋತಿಷ್ಯಕಾರರು ಧ್ಯಾನ ಹಾಗೂ ಯೋಗಗಳಲ್ಲಿ ಪರಿಣಿತಿ ಹೊಂದಿರುತ್ತಿದ್ದರು. ಧ್ಯಾನ, ಏಕಾಗ್ರತೆ ಮನಸ್ಸನ್ನು ಹತೋಟಿಯಲಿಟ್ಟುಕೊಂಡು ಕೇಳುಗನ ನಾಡಿ ಮಿಡಿತ, ಭಾವನೆಗಳನ್ನು ಅರಿತು ಅರೋಗ್ಯ, ಅರ್ಥಿಕ ಪರಿಸ್ಥಿತಿ ಹಾಗೂ ಸಮಸ್ಯೆಗಳಿಗೆ ತನ್ನ ದಿವ್ಯ ದೃಷ್ಟಿಯಿಂದ ನಿಕರವಾದ ಪರಿಹಾರ ನೀಡುತ್ತಿದ್ದರು. ಆದರೇ ಇಂದು ಜ್ಯೋತಿಷ್ಯ ಒಂದು ವ್ಯಾಪರವಾಗಿದೆ. ಶಾಸ್ತ್ರ ಬದ್ದವಾಗಿಲ್ಲದೆ ಅದರ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಜ್ಯೋತಿಷ್ಯ ಇಂದು ವ್ಯಾಪಾರಿಕರಣವಾಗಿದೆ. ಅದರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಮಾತನಾಡಿ ಜ್ಯೋತಿಷ್ಯ ಒಂದು ವಿಜ್ಞಾನ. ಅದು ಗ್ರಹ ಮತ್ತು ರಾಶಿಗಳ ಲೆಕ್ಕಾಚಾರದಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿನಯ್ ಕುಮಾರ್ ಶೆಟ್ಟಿ, ಜೆಇಎಂ ಶಾಲೆ ಅಧ್ಯಕ್ಷ ಶ್ರೀಕಾಂತ್, ಯೋಗ ಗುರು ಪ್ರೇಮ್ ಕುಮಾರ್. ಕಸಾಪ ಸದಸ್ಯರಾದ ಸುಮನಾ ಜಯರಾಜ್, ಕಲ್ಪನಾ ಅಜಿತ್, ಗೀತಾ ಮಕ್ಕಿಮನೆ, ಜಾನಕಿ ಸುಂದರೇಶ್ ಇದ್ದರು.