ಪುತ್ತೂರು: ಬಪ್ಪಳಿಗೆ-ಸಿಂಗಾಣಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ೪ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಬಿಡುಗಡೆಗೊಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಕೆ. ರಾವ್, ಅಧ್ಯಕ್ಷ ಮೋಹನ್ ಗೌಡ, ಪ್ರಧಾನ ಕಾರ್ಯದರ್ಶಿ ಲಿಖಿತ್ ರಾಜ್ ಅರಸ್, ಮಾಜಿ ಅಧ್ಯಕ್ಷ ರವಿ ಬಪ್ಪಳಿಗೆ, ಸದಸ್ಯರಾದ ವಸಂತ ಬಪ್ಪಳಿಗೆ, ಸುಬ್ರಹ್ಮಣ್ಯ ಸಿಂಗಾಣಿ, ಧನ್ವಿತ್ ಸಿಂಗಾಣಿ, ಸುರೇಶ್ ನೆಕ್ಕಿತಪುಣಿ, ಕಿಟ್ಟಣ್ಣ ಮಡಿಕೇರಿ, ಸಾನ್ವಿ ಬಪ್ಪಳಿಗೆ, ಮಹೇಶ್ ಸಿಂಗಾಣಿ, ಸಂದೀಪ್ ಬಪ್ಪಳಿಗೆ, ಶಶಿಕುಮಾರ್ ಸಿಂಗಾಣಿ, ತಿಮ್ಮಪ್ಪ ಬಪ್ಪಳಿಗೆ, ಜಗದೀಶ್ ಸಿಂಗಾಣಿ, ಬಾಲಕೃಷ್ಣ ಸಿಂಗಾಣಿ, ನಿತೀಕ್ಷ್, ನಿತಿನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ವಿವರ:
ಆ.೨೪ರಂದು ಮೊಸರು ಕುಡಿಕೆ ಉತ್ಸವ ನಡೆಯಲಿದ್ದು, ಬೆಳಗ್ಗೆ ೮.೩೦ಕ್ಕೆ ಬಪ್ಪಳಿಗೆ ಬೈಪಾಸ್ ಬಳಿಯಿಂದ ಶೋಭಾಯಾತ್ರೆ ನೆರವೇರಲಿದೆ. ಉದ್ದ ಕಂಬ, ಅಡ್ಡ ಕಂಬ, ಹಗ್ಗ ಜಗ್ಗಾಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಜರುಗಲಿವೆ. ಬೆಳಗ್ಗೆ ೧೦.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ, ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು, ಪುತ್ತೂರು ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಭಾಗವಹಿಸಲಿದ್ದಾರೆ.