ಜಿಲ್ಲೆ

ಐಐಟಿಗೆ ಅಗತ್ಯ ಅನುದಾನದ ಭರವಸೆ

ಧಾರವಾಡ: ಮುಂದಿನ ಸಲವೂ ನರೆಂದ್ರ ಮೋದಿಯವರ ನೇತೃತ್ವದಲ್ಲಿ ನಾವೇ ಅಽಕಾರದಲ್ಲಿರುತ್ತೇವೆ. ಜನವರಿ, -ೆಬ್ರವರಿಯಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಅಷ್ಟರೊಳಗೆ ಅನುದಾನ ಸಿಗಬೇಕು. ಬೇಗ ಪ್ರಸ್ತಾವನೆ ಸಲ್ಲಿಸಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.
ಧಾರವಾಡ ಐಐಟಿಯ 4ನೇ ಘಟಿಕೋತ್ಸವ ಸಮಾರಂಭದಲ್ಲಿ ಐಐಟಿ ಆಡಳಿತ ಮಂಡಳಿ ಸದಸ್ಯರ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಬಾರಿಯೂ ಖಂಡಿತವಾಗಿ ಪುನಃ ನಾವೇ ಅಽಕಾರಕ್ಕೆ ಬರುತ್ತೇವೆ. ಆದರೆ, ಚುನಾವಣೆ ಬಳಿಕ ಖಾತೆ ಬದಲಾಗಬಹುದಷ್ಟೇ. ಐಐಟಿ ಪ್ರಾಜೆಕ್ಟ್- 1ರ ಪ್ರಸ್ತಾವನೆಯನ್ನು ವಾರದಲ್ಲಿ ಕೊಡಿ. ಒಂದು ತಿಂಗಳಲ್ಲಿ ಹಣ ಕೊಡಿಸುತ್ತೇನೆ ಎಂದರು.