ಜಿಲ್ಲೆ

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ತಲ್ಲೂರು ಅಧಿಕಾರ ಸ್ವೀಕಾರ

ಉಡುಪಿ: ಯಕ್ಷಗಾನ ಅಕಾಡೆಮಿ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಬೆಂಗಳೂರಿನಲ್ಲಿ ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯಕ್ಷಗಾನ ಉಳಿದರೆ ಕನ್ನಡ ಉಳಿಯುತ್ತದೆ. ಅಕಾಡಮಿಯೂ ಉಳಿಯುತ್ತದೆ. ಯಕ್ಷಗಾನ ರಾಜ್ಯದ, ದೇಶದ ಕಲೆಯಾಗಬೇಕು. ಎಲ್ಲರೂ ಸೇರಿ ಯಕ್ಷಗಾನದ ಏಳಿಗೆಗೆ ಕೆಲಸ ಮಾಡಬೇಕು. ಕಲೆಯನ್ನು ಸರ್ಕಾರ ಮತ್ತು ಜನರು ಉಳಿಸಿ ಬೆಳೆಸಬೇಕು. ಯಕ್ಷಗಾನದ ಪರಿಚಾರಕನಾದ ನನಗೆ ಇಂಥದೊಂದು ಸೇವೆ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಜವಾಬ್ದಾರಿ ನಿರ್ವಹಿಸಲು ಅವಕಾಶ ಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಅಕಾಡೆಮಿ ರಿಜಿಸ್ಟ್ರಾರ್​ ನಮ್ರತಾ ಎನ್​., ಅಕಾಡೆಮಿ ನೂತನ ಸದಸ್ಯ ಮೋಹನ್​ ಕೊಪ್ಪಾಳ್​, ಕನ್ನಡ ಮತ್ತು ಸಂಸತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್​ ಪಾಟೀಲ್​, ಬಂಜಾರ ಭಾಷಾ ಸಂಸ್ಕತಿ ಅಕಾಡೆಮಿ ಅಧ್ಯಕ್ಷ ಡಾ. ಎ.ಆರ್​. ಗೋವಿಂದಸ್ವಾಮಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ. ಪ್ರ.ಸ. ಕುಮಾರ್​, ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ್​ ಗೊಲ್ಲಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.