ಗಂಗಾವತಿ: ವೇತನ ಶ್ರೇಣಿ ನಿಗದಿ, ಆಡಳಿತ ಕಚೇರಿ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಸಂಘದ ಕಾರ್ಯಾಧ್ಯಕ್ಷ ಎಚ್.ಸುರೇಶ ಮಾತನಾಡಿ, ಮೊಬೈಲ್ ತತ್ರಾಂಶಗಳ ಮೂಲಕ 21ಕ್ಕೂ ಹೆಚ್ಚು ಕೆಲಸವನ್ನು ನಿತ್ಯವೂ ಮಾಡಬೇಕಿದ್ದು, ಅದಕ್ಕೆ ತಕ್ಕಂತೆ ಗೌರವಧನವೂ ಇಲ್ಲ, ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವಂತೆ ಒತ್ತಾಯಿಸಿದರೂ ಸರ್ಕಾರ ಸ್ಪಂದಿಸಿಲ್ಲ.
ಗುಣಮಟ್ಟದ ಮೊಬೈಲ್ ಪೂರೈಸಿಲ್ಲ, ಆಡಳಿತ ನಿರ್ವಹಿಸಲು ಕಚೇರಿಯಿಲ್ಲ. ಅಂತರ ಜಿಲ್ಲಾ ವರ್ಗಾವಣೆ ನಿಯಮಕ್ಕೆ ತಿದ್ದುಪಡಿಯಾಗುತ್ತಿಲ್ಲ. ವರ್ಗಾವಣೆಗೆ ವಿಶೇಷ ಮಾರ್ಗಸೂಚಿ ರಚಿಸುವಲ್ಲಿ ಇಲಾಖೆ ವಿಲವಾಗಿದೆ. ಪ್ರಯಾಣ ಭತ್ಯೆ ಹೆಚ್ಚಳ, ಪ್ರಮಾಣ ಪತ್ರ ವಿತರಣೆ ಲೋಪ ಸಂದರ್ಭದಲ್ಲಿ ವಿಎಗಳ ಮೇಲಾಗುತ್ತಿರುವ ಎ್ಐಆರ್ ಪದ್ಧತಿ ನಿಲ್ಲಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಿವಮೂರ್ತಿನಾಯ್ಕ, ವೀರಯ್ಯ ಗವಿಮಠ, ಚನ್ನಪ್ಪ ಕೋಣನವರ್, ಅಮರೇಶ ಭೋವಿ, ಹನುಮೇಶ ಪೂಜಾರ್, ಷಹನಾಜ್, ರಘುನಾಯ್ಕ, ಅಸ್ಲಂಪಟೇಲ್, ಸುನೀತಾ ಹುಡೇದಾಳ್, ಮಂಜುನಾಥ ದುಮ್ಮಾಡಿ, ಚೈತ್ರಾ ಉತ್ತಂಗಿ, ಪ್ರಿಯಾಂಕ ಗಂಜಿ, ನಾಗವೇಣಿ, ಸಂಗೀತಾ ನಾಗಬಿಂದು ಇತರರಿದ್ದರು.