ಬಡಚಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ಸಹಕಾರ ಸಪ್ತಾಹ ಆಚರಿಸಲಾಯಿತು. ಮಹಾದೇವ ಹೊಕ್ಕುಂಡಿ, ಸದಾಶಿವ ಐಗಳಿ ಸೇರಿದಂತೆ ಇತರರು ಇದ್ದರು. 
ಜಿಲ್ಲೆ

ಸಂಘದ ಆಡಳಿತ ಪಾರದರ್ಶಕವಾಗಿರಲಿ

ಚಿಕ್ಕೋಡಿ: ಉತ್ತಮ ಆಡಳಿತ ಮತ್ತು ಅಂತರ್ಗತ ಬೆಳವಣಿಗೆಗೆ ಸಹಕಾರ ನೀಡುವುದು ಸಹಕಾರ ಸಪ್ತಾಹದ ಘೋಷವಾಕ್ಯವಾಗಿದೆ ಎಂದು ಬೀರೇಶ್ವರ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಆರ್.ಸಿ.ಚೌಗುಲಾ ಹೇಳಿದ್ದಾರೆ.

ಶನಿವಾರ ಯಕ್ಸಂಬಾ ಪಟ್ಟಣದ ಬೀರೇಶ್ವರ ಸಹಕಾರಿ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸಹಕಾರ ಸಪ್ತಾಹ ದಿನಾಚರಣೆ ಅಂಗವಾಗಿ ಸಹಕಾರ ಸಂಸ್ಥೆಯ ಜನಕ ಸಿದ್ಧನಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸಂಘದ ಆಡಳಿತ ಪಾರದರ್ಶಕವಾಗಿದ್ದರೆ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ ಎಂದರು. ಜ್ಯೋತಿ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ಖೋತ, ಸಂಚಾಲಕ ಕಲ್ಲಪ್ಪ ಜಾಧವ, ಜ್ಯೋತಿ ಗಿಡ್ಡ, ಒಜೆಸಿಸ್ ಅಧ್ಯಕ್ಷ ಲಕ್ಷ್ಮಣ ಕಬಾಡೆ, ಉಪಪ್ರಧಾನ ವ್ಯವಸ್ಥಾಪಕ ರಮೇಶ ಕುಂಬಾರ, ಸುರೇಶ ಮಾನೆ, ಕಲ್ಲಪ್ಪ ಹುನ್ನರಗಿ ಇದ್ದರು.

ಕೊಕಟನೂರ ವರದಿ: ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ 67ನೇ ಸಹಕಾರ ಸಪ್ತಾಹ ಆಚರಿಸಲಾಯಿತು. ಗ್ರಾಮದ ಪಿಕೆಪಿಎಸ್‌ನಲ್ಲಿ ಸಹಕಾರ ಪಿತಾಮಹ ಸಿದ್ಧನಗೌಡ ಸಣರಾಮನಗೌಡ ಭಾವಚಿತ್ರಕ್ಕೆ ಇಒ ಸಂಜು ಮುದಕಣ್ಣವರ ಪೂಜೆ ಸಲ್ಲಿಸಿದರು. ಅಧ್ಯಕ್ಷ ಬಸವರಾಜ ಮುದಕಣ್ಣವರ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ನೇಮಣ್ಣ ವೀರಗೌಡ, ನಿರ್ದೇಶಕರಾದ ಅಣ್ಣಪ್ಪ ಖೋತ, ಸುರೇಶ ಪಾಟಣಕರ, ಸವಿತಾ ಹೊನವಾಡಕರ, ಕಾಡಪ್ಪ ಕಾಳಾಪಾಟೀಲ, ಸಂತೋಷ ಮಾಳಿ, ಅವಿನಾಶ ಪುಕಾಳೆ ಉಪಸ್ಥಿತರಿದ್ದರು. ಬಡಚಿ ಪಿಕೆಪಿಎಸ್‌ನಲ್ಲಿ ಸಹಕಾರ ಪಿತಾಮಹ ಸಿದ್ಧನಗೌಡ ಸಣರಾಮನಗೌಡ ಭಾವಚಿತ್ರಕ್ಕೆ ಸಂಘದ ಉಪಾಧ್ಯಕ್ಷ ಮಹಾದೇವ ಹೊಕ್ಕುಂಡಿ, ನಿರ್ದೇಶಕ ಸದಾಶಿವ ಐಗಳಿ ಪೂಜೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಸೈಬಣ್ಣ ಕಮತಗಿ, ವಿಠ್ಠಲ ಪೂಜಾರಿ, ಮಹಾದೇವ ಹೊಕ್ಕುಂಡಿ, ಯಮನಪ್ಪ ದನದಮನಿ, ದಶರಥ ಜಾಧವ, ಸುಖದೇವ ಸಾಳುಂಕೆ, ಮುತ್ತಪ್ಪ ಲೆಂಡೆ, ಶಿವಯ್ಯ ಮಠಪತಿ, ಕೆ.ಎಸ್.ಖೋತ, ಪ್ರಕಾಶ ಆಜೂರ, ಮುರಗೇಶ ನಾಯಿಕ ಇತರರಿದ್ದರು.