ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಸ್ಥೆಯ 12ನೇ ವಾರ್ಷಿಕೋತ್ಸವ ಪ್ರಯುಕ್ತ ನೆರವು ಹಸ್ತಾಂತರ ಕಾರ್ಯಕ್ರಮ ನಡೆಯಿತು 
ಜಿಲ್ಲೆ

ಮಟಪಾಡಿಯ ವಿಜಯ ಬಾಲನಿಕೇತನ ಆಶ್ರಮಕ್ಕೆ ಅಘೋರೇಶ್ವರ ಗ್ರೂಪ್‌ನಿಂದ ನೆರವು

ಇಂದಿರಾ ಎನ್ ಕೆ

ಬ್ರಹ್ಮಾವರ: ಕೋಟದ ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಸ್ಥೆಯ 12ನೇ ವಾರ್ಷಿಕೋತ್ಸವ ಪ್ರಯುಕ್ತ ಮಟಪಾಡಿಯ ವಿಜಯ ಬಾಲನಿಕೇತನ ಆಶ್ರಮಕ್ಕೆ ನೆರವು ಹಸ್ತಾಂತರ, ಸಂಗೀತ ಕಾರ್ಯಕ್ರಮ ಭಾನುವಾರ ನಡೆಯಿತು.

ನಿರೂಪಕ ಪ್ರದೀಪ್ ಪುತ್ರನ್ ಅವರನ್ನು ಸನ್ಮಾನಿಲಾಯಿತು. ವಕೀಲ ಟಿ. ಮಂಜುನಾಥ ಗಿಳಿಯಾರು, ಶ್ರೀಕಾಂತ್ ಶೆಣೈ, ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಅಧ್ಯಕ್ಷ ಎಂ.ಸಿ.ಚಂದ್ರಶೇಖರ್ ಸಾಸ್ತಾನ, ವಿಜಯ ಬಾಲನಿಕೇತನ ಆಶ್ರಮ ಅಧ್ಯಕ್ಷ ಗಿರೀಶ್‌ಚಂದ್ರ ಆಚಾರ್ಯ, ನಿಸ್ವಾರ್ಥ ಸೇವಾ ಟ್ರಸ್ಟ್‌ನ ಗೋಪಿನಾಥ್ ಕಿಣಿ, ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸ್ಥಾಪಕ ರವಿ ಬನ್ನಾಡಿ ಉಪಸ್ಥಿತರಿದ್ದರು.