ಯಾದಗಿರಿ: ಶಕ್ತಿ ಮತ್ತು ಯುಕ್ತಿಯ ಸಂಗಮವಾಗಿದ್ದ ಶಿವಾಜಿ ಮಹಾರಾಜರು ದೇಶಭಕ್ತಿಯ ಪ್ರತೀಕವಾಗಿದ್ದರು. ಸ್ವರಾಜ್ಯದ ಕಲ್ಪನೆಯನ್ನು ಮೊದಲು ಪ್ರತಿಪಾದಿಸಿದ್ದರು ಎಂದು ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನವೂ ಶಿವಾಜಿ ಮಹಾರಾಜರ ಆಡಳಿತವನ್ನು ಮೆಲುಕು ಹಾಕಿದಾಗ ಮಾತ್ರ ನಾವು ರಾಷ್ಟ್ರ ರಕ್ಷಣೆಗೆ ಸಿದ್ಧರಾಗಲು ಸಾಧ್ಯವಾಗುತ್ತದೆ. ಅವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಇಡೀ ದೇಶಕ್ಕೆ ಒಂದು ಶಕ್ತಿ ಇದ್ದಂತೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಸವರ್ೋದಯ ಶಿವಪುತ್ರ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರು 1627ರಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವನೇರಿಯಲ್ಲಿ ಜನಿಸಿದರು. ತಾಯಿ ಜೀಜಾಬಾಯಿಯು ದೇವಗಿರಿಯ ಯಾದವ ರಾಜಮನೆತನ, ತಂದೆ ಶಹಾಜಿ ಬೋಸ್ಲೆಯು ಶಿಸೋಡಿಯ ರಾಜಮನೆತನದವರಾಗಿದ್ದರು. ಹೀಗಾಗಿ ಶಿವಾಜಿಗೆ ರಕ್ತಗತವಾಗಿ ಧೈರ್ಯ, ಶಕ್ತಿ ಹಾಗೂ ಕ್ಷತ್ರೀಯ ಗುಣಗಳಿದ್ದವು ಎಂದು ಹೇಳಿದರು.
ರಾಷ್ಟ್ರದ ಸಂರಕ್ಷಣೆ, ಹಿಂದೂ ಸಂಸ್ಕೃತಿ, ಹಿಂದೂ ಧರ್ಮದ ಉಳಿವಿಗೆ ಗುಡ್ಡಗಾಡಿನ ಮಾವಳಿ ಜನಾಂಗದವರೊಂದಿಗೆ ಸಂಪರ್ಕ ಹೊಂದಿ ಗೆರಿಲ್ಲಾ ಯುದ್ಧ ತಂತ್ರದಿಂದ ಮೋಘಲರು, ದೆಹಲಿಯ ಸುಲ್ತಾನ್, ವಿಜಯಪುರದ ಆದಿಲ್ಶಾಹಿ ಸುಲ್ತಾನರು ಹಾಗೂ ಪೋಚರ್್ಗೀಸರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದರು ಎಂದು ತಿಳಿಸಿದರು.
ಜೀಜಾಬಾಯಿ ಅವರು ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಲ್ಲೆ ರಾಮಾಯಣ, ಮಹಾಭಾರತದ ಕಥೆಗಳು, ದೇಶಕಟ್ಟುವಲ್ಲಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಶಿವಾಜಿಯಲ್ಲಿ ಧೈರ್ಯ ತುಂಬುತ್ತಿದ್ದರು. ಮರಾಠ ಸಮುದಾಯವನ್ನು ಸಂಘಟಿಸಿದ ಶಿವಾಜಿ ಮಹಾರಾಜರು ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡಿದರು. ಸಾಮಾಜಿಕ, ರಾಜಕೀಯ, ಧಾಮರ್ಿಕ ಹಾಗೂ ಶೈಕ್ಷಣಿಕವಾಗಿ ರಕ್ಷಣೆ ಪಡೆಯಲು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅಗತ್ಯವಿದೆ. ಜೀಜಾಬಾಯಿಯವರಂತೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು ಎಂದು ಸಲಹೆ ನೀಡಿದರು.
ಪ್ರಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ, ಸಮಾಜದ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ಚವ್ಹಾಣ, ನಗರಸಭೆ ಮಾಜಿ ಸದಸ್ಯ ನಾರಾಯಣರಾವ್ ಚವ್ಹಾಣ ಇದ್ದರು.
ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ನಿರೂಪಿಸಿದರು.