ಕುಶಾಲನಗರ:
ಸೇನೆ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ತಮ್ಮ ಟ್ರಸ್ಟ್ ವತಿಯಿಂದ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಸಂಸ್ಥಾಪಕರಲ್ಲಿ ಒಬ್ಬರಾದ ಕ್ಯಾ. ಪಟ್ಟಡ ಕಾರ್ಯಪ್ಪ ಹೇಳಿದರುರು. ಟ್ರಸ್ಟ್ ವತಿಯಿಂದ ಭಾನುವಾರ ಕುಶಾಲನಗರದಲ್ಲಿ ಏರ್ಪಡಿಸಿದ್ದ ೨ನೇ ವರ್ಷದ ಗುಡ್ಡಗಾಡು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಸೇನೆ ಸೇರಲು ಬಯಸುವವರಿಗೆ ಕುಶಾಲನಗರ ಕೇಂದ್ರವಾಗಿರಿಸಿಕೊAಡು ಕಳೆದ ೬ ವರ್ಷಗಳಿಂದ ಬೌದ್ಧಿಕ ಮತ್ತು ಶಾರೀರಿಕ ತರಬೇತಿಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಹಲವರು ಈ ತರಬೇತಿ ಪ್ರಯೋಜನ ಪಡೆದುಕೊಂಡು ಈಗಾಗಲೇ ಸೈನ್ಯಕ್ಕೆ ಸೇರಿದ್ದಾರೆ. ಸೈನಿಕ ಶಾಲೆ, ನವೋದಯ ಶಾಲೆ ಪ್ರವೇಶ ಪರೀಕ್ಷೆ, ನಾಗರಿ ಸೇವಾ, ರಕ್ಷಣಾ ಇಲಾಖೆ, ಬ್ಯಾಂಕಿAಗ್ ಪರೀಕ್ಷೆ, ಎನ್‌ಡಿಎ, ಸಿಇಟಿ ಪರೀಕ್ಷೆ ಎದುರಿಸಲು ೩೫ ದಿನಗಳ ವಿಶೇಷ ಗಣಿತ ತರಬೇತಿ, ಆರ್ಮಿ ಜವಾನ್ ಲಿಖಿತ ಪರೀಕ್ಷೆ ತರಬೇತಿಯನ್ನೂ ಕೊಡಲಾಗುತ್ತಿದೆ. ಮ್ಯಾರಾಥಾನ್ ಸ್ಪರ್ಧೆಯನ್ನು ಇನ್ನು ಮುಂದೆ ಪ್ರತಿ ವರ್ಷವೂ ಆಯೋಜಿಸಲಾಗುವುದು. ಮುಂದಿನ ವರ್ಷದಿಂದ ದೊಡ್ಡ ಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮಾತನಾಡಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇದು ಉತ್ತಮ ವೇದಿಕೆ. ಇದೊಂದು ಅದ್ಭುತ ಯೋಜನೆಯಾಗಿದ್ದು ಶಿಕ್ಷಣದ ಜತೆಗೆ ಬದುಕಿನ ಶಿಕ್ಷಣಕ್ಕೆ ಒಳ್ಳೆಯ ಅವಕಾಶ ಕಲ್ಪಿಸಿದಂತಾಗಿದೆ. ರಾಷ್ಟçಪ್ರೇಮ, ರಾಷ್ಟçಭಕ್ತಿ ಇದ್ದರೆ ದೇಶ ಅಭಿವೃದ್ಧಿ ಯಾಗುತ್ತದೆ. ಮ್ಯಾರಾಥಾನ್‌ನಲ್ಲಿ ಗೆದ್ದವರು ಮಾತ್ರವಲ್ಲದೆ ಭಾಗವಹಿಸಿದವರು ಕೂಡ ತಮ್ಮ ಸದೃಢತೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಪ್ರಮುಖರಾದ ಮಂಡೇಪAಡ ಕೆ. ಚಂಗಪ್ಪ, ಮಾಚಂಡ ಗಣೇಶ್ ಪೊನ್ನಪ್ಪ, ಬೊಪ್ಪಂಡ ಕೆ. ಸುಬ್ರಹ್ಮಣ್ಯ, ಕ್ಯಾ. ಎ.ಪಿ. ಸುಬ್ಬಯ್ಯ, ಅಂತಾರಾಷ್ಟಿçÃಯ ಗುಡ್ಡಗಾಡು ಓಟಗಾರ ಹೊಸೋಕ್ಲು ಚಿಣ್ಣಪ್ಪ, ಸಂತೋಷ್, ಅಮೆ ಜನಾರ್ದನ ಮತ್ತಿತರರು ಇದ್ದರು.