ಆನಂದಪುರ: ಸತತ ಮಳೆಯಿಂದಾಗಿ ಸಮೀಪದ ಗೌತಮಪುರ ಗ್ರಾಪಂ ವ್ಯಾಪ್ತಿಯ ನರಸೀಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಬ್ಬಳ್ಳಿ ರಾಘವೇಂದ್ರ ಎಂಬುವರ ವಾಸದ ಮನೆ ಕುಸಿದು ಬಿದ್ದಿದ್ದು, ಶನಿವಾರ ಗ್ರಾಪಂನಿಂದ ಕುಟುಂಬಕ್ಕೆ ದಿನಸಿ ಕಿಟ್ ವಿತರಿಸಿ ಧೈರ್ಯ ತುಂಬಲಾಯಿತು. ಪರಿಹಾರ ಶೀಘ್ರ ದೊರಕಿಸಿ ಕೊಡುವ ಭರವಸೆ ನೀಡಲಾಯಿತು. ಗ್ರಾಪಂ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ನರಸೀಪುರ ಅಶೋಕ, ಕಾರ್ಯದರ್ಶಿ ಸುಚೇತಾ ಇತರರಿದ್ದರು.