ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ನರಹರಿ ಪರ್ವತ ಸದಾಶಿವ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ 5 ಲಕ್ಷ ರೂ. ಮಂಜೂರಾಗಿದ್ದು, ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹಸ್ತಾಂತರಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್, ವಿಟ್ಲ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ, ವಾಣಿ ಉಳ್ಳಾಲ್ತಿ ದೇವಸ್ಥಾನದ ಪರಿಚಾರಕ ಶೇಖರ ಪೂಜಾರಿ, ನರಹರಿ ಪರ್ವತ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಆತ್ಮರಂಜನ್ ರೈ, ದೇವಸ್ಥಾನದ ಪ್ರಧಾನ ಅರ್ಚಕ ಪರಮೇಶ್ವರ ಮಯ್ಯ, ನರಹರಿ ಪರ್ವತ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಎನ್.ಕುಮಾರ್, ಕೃಷ್ಣ ನಾಯಕ್, ಮಾಧವ ಶೆಣೈ, ಪ್ರತಿಭಾ ಎ.ರೈ, ಶ್ರೀಧರ ಶೆಟ್ಟಿ ಬೊಂಡಲ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಶಂಕರ ಆಚಾರ್ಯ, ಕಿಶೋರ್, ಶಂಕರ ಐತಾಳ್, ಸತೀಶ್ ಪಿ.ಸಾಲ್ಯಾನ್, ಓಂ ಪ್ರಕಾಶ್, ಬೋಳಂತೂರು ಒಕ್ಕೂಟ ಅಧ್ಯಕ್ಷೆ ಸೀತಾ, ಕಲ್ಲಡ್ಕ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಮಾಧವ ಸಾಲ್ಯಾನ್, ಸಂಯೋಜಕಿ ವಿದ್ಯಾ, ಸದಸ್ಯರಾದ ಗಣೇಶ್ ನೆಟ್ಲಾ, ರಮೇಶ್ ಕುದ್ರೆಬೆಟ್ಟು, ಚಿನ್ನಾ ಕಲ್ಲಡ್ಕ, ರವಿಚಂದ್ರ, ಧನಂಜಯ, ಸಂತೋಷ್ ಮೊದಲಾದವರಿದ್ದರು.