ಬೈಂದೂರು: ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್, ಬೈಂದೂರು ಕ್ಷೇತ್ರ ಸಮಿತಿಯ ತ್ರೈಮಾಸಿಕ ಸಭೆ ಇತ್ತೀಚೆಗೆ ನಡೆಯಿತು. ಇತ್ತೀಚೆಗೆ ಬೆಂಕಿ ಅವಘಡಕ್ಕೆ ಒಳಗಾದ ನಾವುಂದ ಟೈಲರ್ ಅಂಗಡಿಯ ಮಾಲಕಿ ಪ್ರತಿಭಾ ಆಚಾರ್ಯಗೆ ಪರಿಹಾರಾರ್ಥವಾಗಿ ಬೈಂದೂರು ವ್ಯಾಪ್ತಿಯ ವೃತ್ತಿ ಸಮಿತಿ ವತಿಯಿಂದ ಸಹಾಯಧನ ಹಸ್ತಾಂತರಿಸಲಾಯಿತು.
ಕ್ಷೇತ್ರ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಬೈಂದೂರು, ಕೋಶಾಧಿಕಾರಿ ರಾಜು ಮೊಗವೀರ, ಪೂರ್ವಾಧ್ಯಕ್ಷ ರಾಜು ಕೊಲ್ಲೂರು, ಉಡುಪಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಮಹಾಬಲ ಮೊಗವೀರ, ಕ್ಷೇತ್ರ ಸಮಿತಿ ಹಾಗೂ ಎಲ್ಲ ವಲಯದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಸದಸ್ಯರು ಇದ್ದರು.