ಹೊಸಕೋಟೆ: ಭಾರತೀಯ ಜನತಾ ಪಕ್ಷ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ ಪಕ್ಷದಲ್ಲಿ ಹುದ್ದೆ ನೀಡುವ ಕೆಲಸ ಮಾಡುತ್ತಿದೆ. ಹುದ್ದೆ ಅಲಂಕರಿಸಿದವರು ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಕರೆ ನೀಡಿದರು.
ನಗರದ ಎಂಟಿಬಿ ಭವನದಲ್ಲಿ ತಾಲೂಕು ಬಿಜೆಪಿ ಎಸ್ ಸಿ ಮೋರ್ಚಾ ಪದಾಧಿಕಾರಿಗಳಿಗೆ ಅದೇಶ ಪತ್ರ ವಿತರಿಸಿ ಮಾತನಾಡಿದರು.
ಕಾರ್ಯಕರ್ತರ ಬಗ್ಗೆ ಯಾರದ್ದೆ ಶಿಪಾರಸು ಬೇಕಿಲ್ಲ. ಪ್ರತಿ ಕಾರ್ಯಕರ್ತನ ಕೆಲಸವನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಪಕ್ಷದಲ್ಲಿ ಹುದ್ದೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷಸಂಘಟನೆಯಲ್ಲಿ ಸಕ್ರಿಯವಾಗಿರಬೇಕು ಎಂದರು.
ತಾಲೂಕು ಅಧ್ಯಕ್ಷ ಸತೀಶ್, ನಗರಾಧ್ಯಕ್ಷ ಜಯರಾಜ್,ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ನಾಗೇಶ್, ಯುವ ಮೋರ್ಚಾ ಅಧ್ಯಕ್ಷ ರಾಮು, ನಗರ ಸಭೆ ಸದಸ್ಯ ನಿತೀನ್,ಬಿಜೆಪಿ ಮುಖಂಡರಾದ ಜುಂಜಪ್ಪ, ಶಿವನಾಂದ ಮತ್ತಿತರರು ಇದ್ದರು.
ಗ್ರಾಮಾಂತರ ಉಪಾಧ್ಯಕ್ಷರಾಗಿ ಚಿಕ್ಕನಲ್ಲಾಳ ತಿಮ್ಮರಾಯಪ್ಪ, ನಾರಾಯಣಸ್ವಾಮಿ ಬಾವಪುರ ಮುನಿಕೃಷ್ಣ, ಸೊಣ್ಣದೇನಹಳ್ಳಿ ಪ್ರಸಾದ್, ಪ್ರಧಾನ ಕಾರ್ಯದರ್ಶಿಗಳಾಗಿ ಭಕ್ತರಹಳ್ಳಿ ಪ್ರತಾಪ್ ಹಾಗೂ ಗುಟ್ಟಹಳ್ಳಿ ಸಿ.ವಿ.ಸ್ವಾಮಿ ಅವರನ್ನು ನೇಮಕ ಮಾಡಲಾಯಿತು.
ತಾಲೂಕು ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷರನ್ನಾಗಿ ಕೆ. ನಾಗೇಶ್, ಉಪಾಧ್ಯಕ್ಷರನ್ನಾಗಿ ನಾರಾಯಣಸ್ವಾಮಿ, ಮುನಿಕೃಷ್ಣ, ಎಸ್ ವಿ ಉಮೇಶ್, ಪ್ರಸಾದ್ ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು. ಪ್ರಧಾನ ಕಾರ್ಯದರ್ಶಿ ಸಿ.ವಿ ಸ್ವಾಮಿ, ಜಿ.ಪ್ರತಾಪ್, ಕಾರ್ಯದರ್ಶಿ ರವಿ, ನಾಗರಾಜ್, ಸಾವಿತ್ರಮ್ಮ, ನಾಗರಾಜ್, ರಘುನಾಥ್, ವೆಂಕಟೇಶ್, ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್, ವೇಣುಗೋಪಾ, ನಾರಾಯಣಸ್ವಾಮಿ, ರಮೇಶ್, ಚಂದ್ರಶೇಖರ್ ಹಾಗೂ ಲೋಕೇಶ್ ಅವರನ್ನು ನೇಮಕ ಮಾಡಲಾಯಿತು.