ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಶಿರಸ್ತೇದಾರ್ ಸಲೀಂಗೆ ಮನವಿ ಸಲ್ಲಿಸಿದರು. ನಾಗರಿಕ ವೇದಿಕೆ ತಾಲೂಕು ಸಂಚಾಲಕ ಮಲ್ಲಿಕಾರ್ಜುನ, ಭಗತ್‌ಸಿಂಗ್ ಸಾಂಸ್ಕೃತಿಕ ವೇದಿಕೆ ತಾಲೂಕು ಸಂಚಾಲಕ ರಹಮತ್, ಪ್ರಮುಖರಾದ ರವಿ ಗುರುಸ್ವಾಮಿ, ಚಿದಾನಂದಯ್ಯ, ಷಣ್ಮುಖಪ್ಪ ಇತರರಿದ್ದರು. 
ಜಿಲ್ಲೆ

ಶಾಲೆಗೆ ಶಿಕ್ಷಕರನ್ನು ನಿಯೋಜಿಸಿ

ಹೂವಿನಹಡಗಲಿ: ಬೀರಬ್ಬಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯಕೇಂದ್ರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸಲೀಂಗೆ ಮನವಿ ಸಲ್ಲಿಸಲಾಯಿತು.

ನಾಗರಿಕ ವೇದಿಕೆಯ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಹಾಗೂ ಶಾಲೆಗೆ ಮುಖ್ಯಶಿಕ್ಷಕರನ್ನು ನಿಯೋಜನೆ ಮಾಡಿಲ್ಲ. ಇದರಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಹಾಗೂ ಸೌಲಭ್ಯ ದೊರಯುತ್ತಿಲ್ಲ. ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಗಾಗಿ ದೂರದ ಊರುಗಳಿಗೆ ತೆರಳಬೇಕಾಗಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಸಕ್ಕರೆ ಕಾರ್ಖಾನೆ ಕೆಲಸ ಆರಂಭವಾದರೆ ಸಾರಿಗೆ ವಾಹನಗಳು ಬರುವುದಿಲ್ಲ. ಈ ಎಲ್ಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.

ಭಗತ್‌ಸಿಂಗ್ ಸಾಂಸ್ಕೃತಿಕ ವೇದಿಕೆ ತಾಲೂಕು ಸಂಚಾಲಕ ರಹಮತ್, ಪ್ರಮುಖರಾದ ಪಕ್ಕೀರಪ್ಪ, ಜಹಾಂಗೀರ್, ರವಿ ಗುರುಸ್ವಾಮಿ, ಚಿದಾನಂದಯ್ಯ, ಷಣ್ಮುಖಪ್ಪ, ನಾಗರಾಜ ಇತರರಿದ್ದರು.