ಎಮ್ಮೆಮಾಡು ಇಸ್ಲಾಂ ಮುಸ್ಲಿಂ ಜಮಾತ್ ಕಚೇರಿಗೆ ಭೇಟಿ ನೀಡಿದ ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಅವರನ್ನು ಜಮಾತ್ ಪರವಾಗಿ ಸನ್ಮಾನಿಸಲಾಯಿತು. 
ಜಿಲ್ಲೆ

ವಿಧಾನಸಭೆ ಸಭಾಪತಿ ಖಾದರ್ ದರ್ಗಾಕ್ಕೆ ಭೇಟಿ

ಮಾದೇಶ್ ತಿ.ನರಸೀಪುರ

ನಾಪೋಕ್ಲು: ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ಸೂಫೀ ಶಹೀದ್ ಅವರ ದರ್ಗಾಕ್ಕೆ ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಭಾನುವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಾಡುವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಇಸ್ಲಾಂ ಮುಸ್ಲಿಂ ಜಮಾತ್ ಕಚೇರಿಗೆ ಭೇಟಿ ನೀಡಿದ್ದರು. ಅವರನ್ನು ಜಮಾತ್ ಪರವಾಗಿ ಸನ್ಮಾನಿಸಲಾಯಿತು.