ಜಿಲ್ಲೆ

2023ರಲ್ಲಿ ವಿಧಾನಸಭೆ ಎಲೆಕ್ಷನ್: ಮಂಡ್ಯದಲ್ಲಿ ಟಿಕೆಟ್​ಗಾಗಿ ಹಾಲಿ ಶಾಸಕ- ಮಾಜಿ ಸಂಸದರ ಫೈಟ್​

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಈಗಾಗಲೇ ಶುರುವಾಗಿದೆ ಟಿಕೆಟ್ ಸಮರ! ನಾಗಮಂಗಲ ಕ್ಷೇತ್ರದ ಜೆಡಿಎಸ್ ಟಿಕೆಟ್‌ಗಾಗಿ ಹಾಲಿ ಶಾಸಕ ಮತ್ತು ಮಾಜಿ ಸಂಸದರ ನಡುವೆ ಪೈಪೋಟಿ ಏರ್ಪಟ್ಟಿದೆ.

ನಾಗಮಂಗಲದಲ್ಲಿ ಚುನಾವನೆಗೆ ಸಿದ್ಧತೆ ನಡೆಸಿರುವ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ ಟಿಕೆಟ್ ನನ್ನದೇ. ನೆಕ್ಸ್ಟ್ ಎಂಎಲ್​ಎ ನಾನೇ. ನಾಗಮಂಗಲದಲ್ಲಿ ನನ್ನದೇ ಆಟ ಎಂದಿದ್ದಾರೆ. ಇದನ್ನೂ ಓದಿರಿ ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

ಮಂಡ್ಯದಲ್ಲಿ ಸುದ್ದಿಗಾರರ ಬಳಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ, ನಾವು ಎಷ್ಟೇ ಅಳಬರಿದ್ದರೂ ಜನ ಸಂಪರ್ಕದಲ್ಲೇ ಇರಬೇಕು. ನಾನು ಜೆಡಿಎಸ್​ನಲ್ಲೇ ಇದ್ದೇನೆ, ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ ಎಂದರು.

ಶಾಸಕ ಸುರೇಶ್ ಗೌಡರನ್ನ ಲೋಕಸಭೆಗೆ ಕಳಿಸೋಣಾ. ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ ಎಂದ .ಶಿವರಾಮೇಗೌಡ, ಇದಕ್ಕೆ ಸುರೇಶ್ ಗೌಡರು ಒಪ್ಪದಿದ್ದರೆ ಜನರೇನು ದಡ್ಡರಾ? ನಮ್ಮ ನಾಯಕರು ದಡ್ಡರಾ? ಸುರೇಶ್​ಗೌಡರಿಗೇ ಟಿಕೆಟ್ ಎಂದು ಎಚ್​.ಡಿ.ಕುಮಾರಸ್ವಾಮಿ ಮತ್ತು ಎಚ್​.ಡಿ. ದೇವೇಗೌಡರು ಮಾತು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಇನ್ನು ಮುಂದಿನ ಚುನಾವಣೆಗೆ ನಾಗಮಂಗಲ ಕ್ಷೇತ್ರಕ್ಕೆ ಸುರೇಶ್​ಗೌಡರೇ ಜೆಡಿಎಸ್​ ಅಭ್ಯರ್ಥಿ ಎಂದು ಕಳೆದ ನವೆಂಬರ್​ನಲ್ಲಿ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಹೇಳಿದ್ದನ್ನ ಸ್ಮರಿಸಬಹುದು.