ಜಿಲ್ಲೆ

ಬಾಡಿಗೆದಾರ ವಿದ್ಯಾರ್ಥಿ ಮೇಲೆ ಹಲ್ಲೆ; ವಾಳ್ವೇಕರ ಕುಟುಂಬದ ನಾಲ್ವರ ವಿರುದ್ಧ ದೂರು

ಮಂಜುನಾಥ ಅಂಗಡಿ

ಧಾರವಾಡ: ಕಾರ್ ಪಾರ್ಕಿಂಗ್ ವಿಚಾರವಾಗಿ ಬಾಡಿಗೆದಾರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಹೊಯ್ಸಳನಗರದಲ್ಲಿ ರೋಹನ್ ಎಂಬುವರು ಸ್ವಂತ ಮನೆ ಹೊಂದಿದ್ದು, ವಿದ್ಯಾರ್ಥಿಗಳಿಗೆ ಬಾಡಿಗೆ ನೀಡಿದ್ದಾರೆ. ಆ. ೧೮ರಂದು ರಾತ್ರಿ ೯ ಗಂಟೆ ಸುಮಾರಿಗೆ ಮನೆಯ ಕಾಂಪೌAಡ್ ಒಳಗೆ ಕಾರ್ ಪಾರ್ಕಿಂಗ್ ಮಾಡಿದ್ದ ವಿಚಾರವಾಗಿ ಜಗಳ ನಡೆದಿದೆ. ಬಾಡಿಗೆದಾರ ಹೃಷಿಕೇಶ ತಾಂಗಡೆ ಮಾಲೀಕ ರೋಹನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ರೋಹನ್ ತನ್ನ ತಾಯಿಯೊಂದಿಗೆ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಜಗಳ ಮುಂದುವರಿದಿದೆ. ಈ ವೇಳೆ ಮೋಹನ ವಾಳ್ವೇಕರ, ಮಮತಾ, ಯುವರಾಜ ಮತ್ತು ದೇವರಾಜ ಸೇರಿ ಹೃಷಿಕೇಶನ ಮೇಲೆ ಹಲ್ಲೆ ರಾಡ್‌ನಿಂದ ಮಾಡಿದ್ದಾರೆ. ಈ ಕುರಿತು ರೋಹನ್ ನೀಡಿದ ದೂರಿನ ಅನ್ವಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.