ಹುಬ್ಬಳ್ಳಿ: ಆಸ್ಪತ್ರೆಗೆ ಸೇರಿಸಲು ಮುಂದಾದ ಪೊಲೀಸ್ ಅಧಿಕಾರಿ ಮೇಲೆಯೇ ಗಾಯಗೊಂಡಿದ್ದ ವ್ಯಕ್ತಿ ಹಲ್ಲೆ ನಡೆಸಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಶ್ರವಣಕುಮಾರ ರಾಥೋಡ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ. ನಗರದ ಕೌಲಪೇಟೆಯ ಕೆಇಬಿ ಕ್ರಾಸ್ ಬಳಿ ಸೋಮವಾರ ಚನ್ನಪೇಟೆಯ ಅಜಯ ಬಳ್ಳಾರಿ ಮತ್ತು ಪಾನ್ಶಾಪ್ ಅಂಗಡಿಯವನು ಜಗಳವಾಡುತ್ತಿದ್ದರು. ತಲೆಗೆ ಪೆಟ್ಟು ಬಿದ್ದ ಅಜಯನನ್ನು , ಶ್ರವಣಕುಮಾರ ಅವರು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಲು ಯತ್ನಿಸಿದ್ದಾರೆ. ಆಗ ಅಜಯ್, ಶ್ರವಣಕುಮಾರಿಗೆ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಹಲ್ಲೆ ನಡೆಸಿದ್ದಾನೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.