ಪಾವಗಡ: ಹಾಡಹಗಲೇ ನಡುರಸ್ತೆಯಲ್ಲಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಸಂಜೆ 5.30ರಲ್ಲಿ ಪತ್ರಕರ್ತ ಟಿ.ಎ.ರಾಮಾಂಜೀನಪ್ಪ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಾದ ಟಿ.ಎನ್.ಪೇಟೆ ನಿವಾಸಿಗಳಾದ ನಾರಾಯಣರೆಡ್ಡಿ (49), ರೂಪ (38), ಲಕ್ಷಿ$್ಮದೇವಿ (48) ಹಾಗೂ ಆದಿಲಕ್ಷಿ$್ಮ (40) ರಾತ್ರೋರಾತ್ರಿ ಬಂಧಿಸಲಾಗಿದೆ. ಆರೋಪಿಗಳನ್ನು ಮಂಗಳವಾರ ಪಾವಗಡ ಜೆಎಂಎ್ಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು ಜೈಲಿಗೆ ಕಳುಹಿಸಲಾಗಿದೆ.
ಪ್ರತಿಭಟನೆ: ಪತ್ರಕರ್ತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದವರನ್ನು ಗಡೀಪಾರು ಮಾಡುವಂತೆ ಒತ್ತಾಯಿಸಿ ಹಾಗೂ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಮಂಗಳವಾರ ಪತ್ರಕರ್ತ ಸಂಟನೆಗಳು, ದಲಿತಸಂಟನೆಗಳು, ಶ್ರೀರಾಮಸೇನೆ, ತಾಲೂಕು ಕುರುಬ ಸಮಾಜ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಐಬಿಯಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶನಿಮಹಾತ್ಮ ದೇವಾಲಯದ ಬಳಿ ಮಾನವಸರಪಳಿ ರಚಿಸಿ ರಸ್ತೆತಡೆ ಕೂಡ ನಡೆಸಿ ಆರೋಪಿಗಳ ವಿರುದ್ಧ ಉಗ್ರಕ್ರಮಕ್ಕೆ ಒತ್ತಾಯಿಸಿ ತಹಸೀಲ್ದಾರ್ ಡಿ.ಎನ್.ವರದರಾಜು ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.