ಜಿಲ್ಲೆ

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಾನ್‌ಸ್ಟೆಬಲ್ ಮೇಲೆ ಹಲ್ಲೆ

ರವಿ ಎಸ್. ಬಳೂಟಗಿ

ಮುಳಗುಂದ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪೊಲೀಸ್ ಕಾನ್‌ಸ್ಟೆಬಲ್ ಗಿರಿಯರಡ್ಡಿ ಕುರಹಟ್ಟಿ ಅವರ ಮೇಲೆ ಹಲ್ಲೆ ಮಾಡಿದ ಘಟನೆ ಸಮೀಪದ ಚಿಂಚಲಿ ಗ್ರಾಮದಲ್ಲಿ ಸಂಭವಿಸಿದೆ. ಬಂದೋಬಸ್ತ್‌ಗೆ ತೆರಳಿದ್ದ ಕಾನ್‌ಸ್ಟೆಬಲ್ ಮೆರವಣಿಗೆ ಬೇಗ ಅಂತ್ಯಗೊಳಿಸಲು ಸೂಚಿಸಿದ್ದಾರೆ. ಆಗ ಚಿಂಚಲಿಯ ದುರ್ಗಾನಗರದ ಹಲವು ಯುವಕರು ಏಕಾಏಕಿ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.