ಕಾಸರಗೋಡು: ನಗರಸಭಾ ಕಾರ್ಯದರ್ಶಿ ಪಿ.ಎ.ಜಸ್ಟಿನ್ ಅವರ ಮೇಲೆ ಹಲ್ಲೆ ನಡೆಸಿದ ತಂಡದ ಒಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಬಾಂಗೋಡು ನಿವಾಸಿ ಗುತ್ತಿಗೆದಾರ ಶಿಹಾಬುದ್ದೀನ್ ಬಂಧಿತ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ನಗರಸಭಾ ಸಿಬ್ಬಂದಿ ಎದುರಲ್ಲೇ ತಂಡ ಹಲ್ಲೆ ನಡೆಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪಿ.ಎ.ಜಸ್ಟಿನ್ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ಹಲ್ಲೆ ನಡೆಸಿರುವುದು, ಕರ್ತವ್ಯ ನಿರ್ವಹಣೆಗೆ ಅಡಚಣೆ ಮುಂತಾದ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. ಶುಕ್ರವಾರ ಘಟನೆ ನಡೆದಿತ್ತು.