ಬೆಳಗಾವಿ: ತಾಲೂಕಿನ ಮರಣಹೋಳ ಗ್ರಾಮದಲ್ಲಿ ಪಿಡಿಒ, ಗ್ರಾಮ ಲೆಕ್ಕಾಧಿಕಾರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಕಾಕತಿ ಪೊಲೀಸರು, ಗ್ರಾಮದ ಲಕ್ಷ್ಮಣ ಭರಮಾ ಪಾಟೀಲ (35) ಎಂಬಾತನನ್ನು ಬಂಧಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನಲ್ಲಿರಿಸಲಾಗಿದ್ದ ಶಂಕಿತರ ಗಂಟಲು ದ್ರವ ಸಂಗ್ರಹ ತೆಗೆದುಕೊಳ್ಳಲು ಶುಕ್ರವಾರ ಹೊಸ ವಂಟಮೂರಿ ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಆರೋಗ್ಯ ಸಿಬ್ಬಂದಿ ತೆರಳಿದ್ದರು. ಈ ವೇಳೆ ಕ್ವಾರಂಟೈನ್‌ನಲ್ಲಿರುವ ಇಬ್ಬರು ಮತ್ತು 6 ಜನ ಹೊರಗಿನವರು ಕರೊನಾ ಸೇನಾನಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ಇಬ್ಬರು ಹಾಗೂ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕಾಕತಿ ಠಾಣೆ ಪೊಲೀಸರು, ಹಲ್ಲೆ ನಡೆಸಿದ 6 ಜನರ ಪೈಕಿ ಓರ್ವನನ್ನು ಶನಿವಾರ ಬಂಧಿಸಿದ್ದಾರೆ. ಇಬ್ಬರು ಕ್ವಾರಂಟೈನ್‌ನಲ್ಲಿದ್ದಾರೆ. ತಲೆ ಮರೆಸಿಕೊಂಡಿರುವವರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.