ಸಾಂದರ್ಭಿಕ ಚಿತ್ರ 
ಜಿಲ್ಲೆ

ಬಾರ್‌ನಲ್ಲಿ ತಂಡದಿಂದ ಹಲ್ಲೆ

ಇಂದಿರಾ ಎನ್ ಕೆ

ಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಬಾರ್‌ಗೆ ಮದ್ಯ ಖರೀದಿಸಲೆಂದು ಹೋಗಿದ್ದ ವ್ಯಕ್ತಿಯ ಮೇಲೆ ಮೂವರ ತಂಡ ಹಲ್ಲೆ ನಡೆಸಿದೆ. ಹಲ್ಲೆಗೀಡಾದ ನೆಲ್ಯಾಡಿಯ ನಿವಾಸಿ ಜೋಳಿ ಜೋಸೆಫ್ (61 ) ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ನೆಲ್ಯಾಡಿಯ ಬಾರ್‌ಗೆ ಮದ್ಯ ಖರೀದಿಸಲೆಂದು ಹೋಗಿದ್ದ ವೇಳೆ ಆರೊಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬುವರು ಜೋಸೆಫ್‌ಗೆ ಬಿಯರ್ ಬಾಟ್ಲಿಯಿಂದ ತಲೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.