ಜಿಲ್ಲೆ

ಮುಂಬರುವ ಚುನಾವಣೆಯಲ್ಲಿ ರಾಮನಗರದಿಂದ ನಿಖಿಲ್​ ಸ್ಪರ್ಧೆ: ಎಚ್​ ಡಿ ಕುಮಾರಸ್ವಾಮಿ ಹೇಳಿದ್ದೇನು?

ರಾಮನಗರ: ರಾಜಕೀಯ ಭವಿಷ್ಯದ ಬಗ್ಗೆ ನಿಖಿಲ್​ಗೆ ಇನ್ನೂ ವಯಸ್ಸಿದೆ ಚುನಾವಣೆಗೆ ನಿಲ್ಲುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಎಚ್​ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಂದಲೇ ನಿಖಿಲ್​ ಸ್ಪರ್ಧೆ ಬಗ್ಗೆ ಪಕ್ಷವೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಸ್ವತಃ ನಿಖಿಲ್​ ಕೂಡ ನಾನು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡ್ತೇನೆ ಎಂದಿದ್ದು, ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ರಾಮನಗರದಲ್ಲಿ ಅನಿತಾಕುಮಾರಸ್ವಾಮಿರವರ ಸ್ಪರ್ಧೆ ವಿಚಾರವೂ ಪಕ್ಷ ನಿರ್ಧಾರ ಮಾಡಲಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನ್ನ ಮೇಲೆ ತುಂಬಾ ಒತ್ತಡ ಹಾಕುತ್ತಾರೆ ಎಂದರು.

ಮಂಡ್ಯದಿಂದ ಕಳೆದ ಲೋಕಸಭೆಗೆ ಸ್ಪರ್ಧೆ ಬೇಡ ಎಂದು ನಿಖಿಲ್​ಗೆ ಹೇಳಿದ್ದೇ, ಅಲ್ಲಿಯ ಶಾಸಕರು ಒತ್ತಡ ಹಾಕಿ ಲೋಕಸಭೆ ಚುನಾವಣೆಗೆ ನಿಲ್ಲಿಸಿದರು, ಪಕ್ಷ ಇದ್ರೆ ನಾವು ಎಂಬುದು ಈಗ ನಿಖಿಲ್​ಗೆ ಗೊತ್ತಾಗಿದೆ ಹಾಗಾಗಿ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)