ವಿಜಯವಾಣಿ ಸುದ್ದಿಜಾಲ ಗದಗ
ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಟಕದ ವತಿಯಿಂದ ಬುಧವಾರ ರಾಷ್ಟ್ರೀಯ ಭಾವೈಕ್ಯತೆ ಸಾಂಸತಿಕ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರ್ಡಿಪಿಆರ್ ವಿವಿ ರಜಿಸ್ಟರ್ ಡಾ. ಸುರೇಶ್ ನಾಡಗೌಡರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಂರ್ಪೂಣವಾಗಿ ತೊಡಗಿಸಿಕೊಂಡ ವಿದ್ಯಾಥಿರ್ಗಳು ತಮ್ಮ ಜೀವನದಲ್ಲಿ ಉತ್ತಮ ಆದರ್ಶ ವಿದ್ಯಾಥಿರ್ ಆಗಬೇಕು. ರಾಷ್ಟ್ರೀಯ ಸೇವಾ ಯೋಜನೆಗಳ ವಿದ್ಯಾಥಿರ್ಗಳನ್ನು ಉತ್ತಮ ನಾಗರಿಕನಾಗುವ ವೇದಿಕೆ ಸೃಷ್ಟಿಸಿಕೊಡುತ್ತವೆ. ವಿಶೇಷ ಶಿಬಿರಗಳನ್ನು ಏರ್ಪಡಿಸಿದಂತಹ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿನ ಜನಜೀವನದ ಬದುಕಿನ ಒಡನಾಟದ ಚಿತ್ರಣವನ್ನು ವಿದ್ಯಾಥಿರ್ಗಳು ನೇರವಾಗಿ ಕಾಣಬಹುದು. ಜೀವನದಲ್ಲಿ ಉತ್ತಮ ಸ್ಥಾನ ದೊರೆತ ನಂತರ ಟಕದಲ್ಲಿ ಕಲಿತ ಆದರ್ಶಗಳನ್ನು ಪಾಲಿಸಬೇಕು. ಸಾಮಾಜಿಕ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಾಮಾಜಿಕ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ಚೇರ್ಮನ್ ಆನಂದ ಪೋತ್ನಿಸ ಮಾತನಾಡಿ, ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ನಿಮಿತ್ಯ ನಮ್ಮ ಸಂಸ್ಥೆಯ ಆವರಣದಲ್ಲಿ ವಿವಿಧ ರಾಜ್ಯಗಳ ಸಾಂಸತಿಕ ಕಾರ್ಯಕ್ರಮಗಳ ನಡೆಯುತ್ತಿರುವುದು ವಿಶೇಷ. ಇಂತಹ ಕಾರ್ಯಕ್ರಮಗಳಿಗೆ ಸಂಸ್ಥೆ ಸಹಕಾರ ನೀಡುತ್ತದೆ ಎಂದರು.
ಶಿಬಿರದಲ್ಲಿ ಕೇರಳ, ಮಹಾರಾಷ್ಟ್ರ, ತಮಿಳುನಾಡು ಆಂಧ್ರಪ್ರದೇಶ ಸೇರಿದಂತೆ ಒಟ್ಟು 6 ರಾಜ್ಯಗಳ ಸೇವಕರು ಹಾಗೂ ಕರ್ನಾಟಕದ ಎಂಟು ವಿಶ್ವವಿದ್ಯಾಲಯದ ಸ್ವಯಂಸೇವಕ ಸೇವಕರು ಸೇರಿ ಒಟ್ಟು 120 ಸ್ವಯಂಸೇವಕ ಸೇವಕಿಯರು ಸಾಂಸತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾಚಾರ್ಯ ಪ್ರೊ. ಕೆ. ಗಿರಿರಾಜ ಕುಮಾರ್, ಡಾ. ವಿ. ಟಿ. ನಾಯ್ಕರ, ಪ್ರಶಾಂತ ಮೇರವಾಡಿ, ಬಾಹುಬಲಿ ಜೈನರ ಇತರರು ಉಪಸ್ಥಿತರಿದ್ದರು.