ಜಿಲ್ಲೆ

ಯುವಕರು ರಾಷ್ಟ್ರ ನಿರ್ಮಾಣದ ಕುರಿತು ಚಿಂತನೆ ಮಾಡುವುದು ಅವಶ್ಯಕ - ಡಾ: ಬಿ ಜಿ ಜವಳಿ

Gadag - Shivanand Hiremath

ನಗರದ ಆದರ್ಶ ಶಿಕ್ಷಣ ಸಂಸ್ಥೆಯ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ಡಿ ಎಂ ಬಾಗ್ಮಾರ್ ಮೆಮೋರಿಯಲ್ ಪಿಜಿ ಕೋರ್ಸ್ ಇನ್ ಕಾಮರ್ಸ್ ವಿಭಾಗಗಳ ವಾರ್ಷಿಕ ಸ್ನೇಹ ಸಮ್ಮೇಳನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮಾಜಿ ಪಾರ್ಲಿಂಗ  ಬೋರ್ಡ್ ಸದಸ್ಯರಾದ ಹಾಗೂ ಜಗದ್ಗುರು  ಅನ್ನದಾನ ಶಿಕ್ಷಣ ಸಮಿತಿಯ ಆಡಳಿತ ಅಧಿಕಾರಿಗಳಾದ ಡಾ. ಬಿ ಜಿ ಜವಳಿ ಅವರು ಆಗಮಿಸಿದ್ದರು ವಿದ್ಯಾರ್ಥಿಗಳ ದ್ವೇಷಿಸಿ ಮಾತನಾಡಿ ರಾಷ್ಟ್ರ ಸಂಪತ್ತು ಎಂದರೆ ಯುವಕರು ಈ ಯುವ ಸಂಪತ್ತು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಹೀಗಾಗಿ ಅವರಿಗೆ ಸರಿಯಾಗಿ ದಾರಿ ತೋರಿಸುವ ಕೆಲಸವಾಗಬೇಕಿದೆ ಕಾರಣ ಯುವಕರು ನೃತ್ಯ ಮೂಲಕ ಹಣ ಸಂಪಾದಿಸುವ ಹಿಂದೆ ಬಿದ್ದಿದ್ದಾರೆ ಅದರ ಬದಲು ಜೀವನ ಮೌಲ್ಯಗಳನ್ನು ಅಳವಡಿಸುವ ಮುಖೇನ ಒಗ್ಗಟ್ಟಿನಿಂದ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕು ಅಷ್ಟೇ ಅಲ್ಲದೆ ವಾಣಿಜ್ಯ ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿ, ವಾಣಿಜ್ಯ ವಿಷಯದಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಪದವಿ ಅವಕಾಶಗಳ ಹೆಬ್ಬಾಗಿಲನ್ನೇ ವಿದ್ಯಾರ್ಥಿಗಳಿಗೆ ತೆರೆಯುತ್ತದೆ. ಅದೇ ರೀತಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಪೋಸ್ಟ್ ಗ್ರಾಜುವೇಟ್ ಕೋರ್ಸ್‌ಗಳು ಉತ್ತಮ ಉದ್ಯೋಗಾವಕಾಶವನ್ನು ಒದಗಿಸುತ್ತವೆ. ಬಿ. ಕಾಂ. ಪೂರೈಸಿದ ಕೂಡಲೇ ಬಹುತೇಕ ವಿದ್ಯಾರ್ಥಿಗಳು ಸಹಜವಾಗಿಯೇ ಎಂ. ಕಾಂ ಅಥವಾ ಎಂಬಿಎ ಸೇರಲು ಉತ್ಸಾಹ ತೋರುತ್ತಾರೆ. ಎಂಬಿಎ ಮಾಡಿದವರು ಅಂತಾರಾಷ್ಟ್ರೀಯ ಉದ್ಯಮ, ಮಾನವ ಸಂಪನ್ಮೂಲ ಅಭಿವೃದ್ಧಿ, ಹಣಕಾಸು ಸೇರಿದಂತೆ ಹಲವು ವಿಷಯಗಳಲ್ಲಿ ಸ್ಪೆಶಲೈಸೇಶನ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇನ್ನು ಎಂ.ಕಾಂ. ಹೊರತಾಗಿ ಸಿಎ ಮತ್ತು ಸಿಎಸ್ ಕೂಡ ಮಾಡಲು ಸಾಧ್ಯವಿದೆ. ಇದಲ್ಲದೆ ಇನ್ನೂ ಹಲವು ಅವಕಾಶಗಳು ವಾಣಿಜ್ಯ ವಿದ್ಯಾರ್ಥಿಗಳ ಮುಂದಿದೆ. ಮುಖ್ಯವಾಗಿ ಆಕ್ಚುವರಿಯಲ್ ಸೈನ್ಸ್, ಎಂಎಪಿಜಿ ಡಿಪ್ಲೋಮಾ ಇನ್ ಜರ್ನಲಿಸಂ, ಪಿಜಿ ಡಿಪ್ಲೋಮಾ ಇನ್ ಅಡ್ವರ್ಟೈಸಿಂಗ್ ಮಾರ್ಕೆಟ್ ರಿಸರ್ಚ್, ಹೊಟೇಲ್ ಮ್ಯಾನೇಜ್‌ಮೆಂಟ್, ಎಲ್‌ಎಲ್‌ಬಿ ಕೂಡ ಮಾಡಬಹುದು. ಮಾಸ್ಟರ್ಸ್ ಡಿಗ್ರಿಯಿಂದಾಗಿ ವಿಷಯದ ಮೇಲೆ ಆಳವಾದ ಜ್ಞಾನ ಪಡೆಯಲು ಸಾಧ್ಯವಿರುವುದು ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಇಲ್ಲಿ ಇಂಟರ್ನ್‌ಶಿಪ್ ಕೂಡ ಇರುವುದರಿಂದ ಪ್ರಾಕ್ಟಿಕಲ್ ಅನುಭವ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಇದರಿಂದಾಗಿ ವೇತನವೂ ಹೆಚ್ಚು ಸಿಗುತ್ತದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಹಲವಾರು ಪೋಸ್ಟ್ ಗ್ರಾಜುವೇಶನ್ ಕೋರ್ಸ್‌ಗಳು ಲಭ್ಯವಿವೆ. ಇದರಲ್ಲಿ ಮಾರ್ಕ ೆಟಿಂಗ್, ಅಕೌಂಟಿಂಗ್, ಇನ್‌ಫಾರ್ಮೇಶನ್ ಸಿಸ್ಟಮ್ಸ್, ಇಂಟರ್‌ನ್ಯಾಷನಲ್ ಬ್ಯುಸಿನೆಸ್, ಇನ್ಶೂರೆನ್ಸ್ ಮತ್ತು ಫೈನಾನ್ಸ್ ಪ್ರಮುಖವಾದವು. ಇದಲ್ಲದೆ ಟ್ಯಾಕ್ಸೇಷನ್‌ನಲ್ಲಿ ಪಿಜಿ ಡಿಪ್ಲೋಮಾ ಬಗ್ಗೆ ಕೂಡ ಪ್ರಯತ್ನ ಪಡೆಬಹುದು ಎಂದು ತಮ್ಮ ಅತಿಥಿಗಳ ನುಡಿಯಲ್ಲಿ ಹಂಚಿಕೊಂಡರು.

ಅತ್ಯುತ್ತಮ ವಿದ್ಯಾರ್ಥಿ ಕುಮಾರ ಅಶ್ವತ್ಥಮ್ ಚವಡಿ ಅತ್ಯುತ್ತಮ ವಿದ್ಯಾರ್ಥಿನಿ ಕುಮಾರಿ ಸಹನಾ ಕುಲಕರ್ಣಿ ಇವರನ್ನ ಗೌರವಿಸಲಾಯಿತು ಹಾಗೆ ವಿಶ್ವವಿದ್ಯಾಲಯಕ್ಕೆ ಬಿ ಕಾಂ ಭಾಗದಲ್ಲಿ ಐದನೇ ರಾಂಕ್ ಗಳಿಸಿದ ಕುಮಾರಿ ಲಕ್ಷ್ಮಿ ಬಳ್ಳಾರಿ ಇವರ ತಂದೆ ತಾಯಿಗಳನ್ನು ಗೌರವಿಸಲಾಯಿತು ಸಿಎ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿದ ಕಿಶನ್ ಕಬಾಡಿ ಹಾಗೂ ಕ್ರೀಡಾ ವಿಭಾಗದಲ್ಲಿ ವಿಶ್ವವಿದ್ಯಾಲಯದ ಬ್ಲೂ ಗಳಾಗಿ ಹೊರಹೊಮ್ಮಿದ ಭಾವನ ನಾಯ್ಕರ್ ಪ್ರಸಾದ್ ಕಲಬುರ್ಗಿ ವಿಜಯ್ ಪತ್ತಾರ್ ಈ ವಿದ್ಯಾರ್ಥಿಗಳನ್ನು ಇದೆ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿಯವರು ಮಾತನಾಡಿ ಬಿ ಕಾಂ ಮತ್ತು ಎಂ ಕಾಂ ವಿಭಾಗಗಳಲ್ಲಿ ಕ್ರೀಡಾಕ್ಷೇತ್ರ ಎನ್‌ ಸಿ ಸಿ ಎನ್ ಎಸ್ ಎಸ್ ಕಲಾವಿಭಾಗ ಬೇರೆ ಬೇರೆ ವಿಭಾಗಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ ಶಿಕ್ಷಕರನ್ನ ತಮ್ಮ ಅಧ್ಯಕ್ಷ ನುಡಿಗಳಲ್ಲಿ ಗೌರವಿಸಿದರು. ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಕಿಂಡಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಸ್ವಾಗತವನ್ನು ಮಾಡಿದರು ಉಪ ಪ್ರಾಚಾರ್ಯರಾದ ಡಾ. ವಿ ಟಿ ನಾಯಕರ ಅತಿಥಿಗಳ ಪರಿಚಯವನ್ನು ನೆರವೇರಿಸಿಕೊಟ್ಟರು. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರೊ. ಎಸ್ ಬಿ ಜಾದವ್ ಪ್ರೊ.  ಎಸ್ಎಂ ಬೆಲ್ಗಂ ಶ್ರೀ ಆದಿತ್ಯ ಜೋಶಿ ನಡೆಸಿಕೊಟ್ಟರು ಈ ಒಂದು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಪಾಲಕರು ಆದರ್ಶ ಶಿಕ್ಷಣ ಸಂಸ್ಥೆಯ ಗೌರವಾನ್ವಿತ ಸದಸ್ಯರು ಹಾಗೂ ಮಹಾವಿದ್ಯಾಲಯದ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.