ಗದಗ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಗದಗ ಜಿಲ್ಲಾ ವಲಯ ಮಟ್ಟದ ಯುವಜನೋತ್ಸವ -2024 ಸಾಂಸ್ಕೃತಿಕ ಸ್ಪರ್ಧೆಯನ್ನು ಶ್ರೀ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿ ಕಲಾ, ವಾಣಿಜ್ಯ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊಳೆ ಆಲೂರಿನಲ್ಲಿ ಆಯೋಜಿಸಲಾಗಿತ್ತು ನಗರದ ಆದರ್ಶ ಶಿಕ್ಷಣ ಸಮಿತಿಯ ಶ್ರೀ ವಿ ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಕಲಾ ವಿಭಾಗದ ವಿದ್ಯಾರ್ಥಿಗಳು ಈ ಯುವಜನೋತ್ಸವ ಸ್ಪರ್ಧೆಯಲ್ಲಿ ಸತತ ನಾಲ್ಕನೇ ವರ್ಷ ಸಮಗ್ರ ವೀರಾಗ್ರಹಣಿ ಪ್ರಶಸ್ತಿ ಗಳಿಸುವ ಮೂಲಕ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶಾಸ್ತ್ರೀಯ ಸಂಗೀತ- ಶಿವಯೋಗಿ ಗಡ್ಡದಮಠ, ಸುಗಮ ಸಂಗೀತ -ಕವನಾ ಕೊನ್ನೂರ್, ವಾದ್ಯ ಸಂಗೀತ- ಶಾಂತಲಾ ಕಾಮತ್, ಪಾಶ್ಚಿಮತ್ಯ ಗೀತೆ- ಸ್ಯಾಂಟ್ರೋ, ಸಮೂಹ ಗೀತೆ -ಶಿವಯೋಗಿ ಮತ್ತು ತಂಡ, ಜನಪದ ವಾದ್ಯ ಮೇಳ- ಮನೋಜ್ ದಲ ಬಂಜನ್ ಮತ್ತು ತಂಡ, ಜನಪದ ನೃತ್ಯ- ಗಿರಿ ಮಲ್ಲಿಕಾ ಮತ್ತು ತಂಡ, ಶಾಸ್ತ್ರೀಯ ನೃತ್ಯ- ವರ್ಷ ಕಲ್ಕಂಬಿ, ನಾಟಕ- ಮೇಘ ಪಾಟೀಲ್ ಮತ್ತು ತಂಡ, ಇನ್ಸ್ಟಾಲೇಶನ್- ಆದರ್ಶ ಅಕ್ಕಿ ಮತ್ತು ತಂಡ , ಭಾಷಣ- ರಮೇಶ್ ಹಂಸನೂರು, ಕುಲಾಜ ಆದರ್ಶಅಕ್ಕಿ, ಕಾರ್ಟೂನ್- ಕುಮಾರಿ ಪ್ರಿಯ, ನಾಟಕ ಸ್ವಪ್ನ ಬಾನು ಮತ್ತು ತಂಡ, ಚಿತ್ರಕಲೆ-ಪೂಜಾ ಪಾಟೀಲ್, ಸ್ಕಿಟಿ -ರಂಜಿತಾ ಹರ್ತಿ ಮತ್ತು ತಂಡ ರಂಗೋಲಿ-ಕು. ದಿವ್ಯ ಮಚರೆ ಮೈಮ ಶಶಾಂಕ್ ಕಾಟವಾ ಒಟ್ಟು 19 ವಿಭಾಗಗಳಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಸತತ ನಾಲ್ಕನೇ ವರ್ಷ ಸಮಗ್ರ ವೀರಾಗ್ರಹಣಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಗಳಿಸಿದ ಸ್ಪರ್ಧಾ ವಿಜೇತರಿಗೆ ಸಂಸ್ಥೆಗೆ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಠಗಿ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್, ಉಪಾಧ್ಯಕ್ಷರಾದ ಶ್ರೀ ಪಿ ಆರ್ ಅಡವಿ, ಶ್ರೀ ಜಿ ವಿ ಬಳಗಾನೂರು, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಖಂಡಿ, ಸಹ ಕಾರ್ಯದರ್ಶಿಗಳಾದ ಶ್ರೀ ಬೆನಕನಹಾಳ್, ಖಜಾಂಚಿ ಮುಕುಂದ್ ಪೋತ್ನಿಸ್, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಉಪ ಪ್ರಾಚಾರ್ಯರು ಹಾಗೂ ಐ ಕ್ಯೂ ಎ ಸಿ ಕೋ-ಆರ್ಡಿನೇಟರ್ ಡಾ. ವಿ. ಟಿ ನಾಯ್ಕರ್ ಅಂಗಸಂಸ್ಥೆಗಳ ಪ್ರಾಚಾರ್ಯರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಕಲಾವಿಭಾಗದ ಮುಖ್ಯಸ್ಥರಾದ ಪ್ರೊ. ಬಾಹುಬಲಿ ಪಿ ಜೈನರ ಅವರಿಗೆ ಅಭಿನಂದನೆ ಮೂಲಕ ಮುಂದಿನ ಹಂತದ ಸ್ಪರ್ಧೆಗೆ ಶುಭಾಶಯ ಕೋರಿದ್ದಾರೆ.