ಜಿಲ್ಲೆ

ದೃಢ ನಿರ್ಧಾರ ತೆಗೆದುಕೊಳ್ಳಲು ಹೊಸ ವಿಚಾರಗಳನ್ನು ಕಲಿಯಬೇಕು- ಡಾ: ಅಂಗಡಿ.

Gadag - Shivanand Hiremath

ನಗರದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ದಿವಂಗತ ಕೆ ಎಸ್ ಎನ್ ಅಯ್ಯಂಗಾರ್ ಸ್ಮರಣಾರ್ಥ ಪ್ರಥಮ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ ವಿ ಕುಷ್ಟಗಿ ಉಪಾಧ್ಯಕ್ಷರಾದ ಪಿ ಆರ್ ಅಡವಿ, ಕಾರ್ಯದರ್ಶಿಗಳಾದ ಶ್ರೀ ಎ ಡಿ ಗೋಡಕಿಂಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಎ ಡಿ ಗೋಡಖಿoಡಿಯವರು ಕೆ ಎಸ್ ಎನ್ ಅಯ್ಯಂಗಾರ್ ಅವರ ವಿದ್ಯಾ ದಾನ ಶಿಕ್ಷಣ ಸಮಿತಿಯಲ್ಲಿ ಸಲ್ಲಿಸಿದ ಸೇವೆ ಅವರ ಅನೇಕ ಕಾರ್ಯಕ್ಷೇತ್ರದ ಸಾಧನೆಗಳನ್ನು ತಮ್ಮ ನುಡಿಗಳಲ್ಲಿ ಹಂಚಿಕೊಂಡರು.

ಕೃತಕ ಬುದ್ಧಿವಂತಿಕೆ ಈ ವಿಷಯವಾಗಿ ಹುಲಕೋಟಿಯ ರೂರಲ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಡಾ. ಶರಣ ಬಸವರಾಜ್ ಎಚ್ ಅಂಗಡಿಯವರು ಮಾತನಾಡಿ ಪ್ರತಿಯೊಬ್ಬ ಮನುಷ್ಯ ನಿರ್ಧಾರ ತೆಗೆದುಕೊಳ್ಳಲು ಹೊಸ ಹೊಸ ವಿಚಾರಗಳನ್ನು ಕಲಿಯಬೇಕು ಅದು ಕೃತಕ ಬುದ್ಧಿವಂತಿಕೆ ಆಗಿದೆ ಕಲಿಸುವ ವ್ಯಕ್ತಿ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಅರಿತುಕೊಂಡು ಅವರಿಗೆ ಶಿಕ್ಷಣ ನೀಡಬೇಕು ವಿದ್ಯಾರ್ಥಿಗಳು ದೃಢ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಅವಕಾಶವನ್ನು ಕಲ್ಪಿಸಬೇಕು ಆಸಕ್ತಿ ಇರುವ ಕ್ಷೇತ್ರದಲ್ಲಿ ಅವರನ್ನು ಬೆಳೆಸಿದರೆ ಏನನ್ನಾದರೂ ಸಾಧಿಸಬಹುದು ಅಷ್ಟೇ ಅಲ್ಲ ಇವತ್ತು ತಂತ್ರಜ್ಞಾನಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆಳೆಯುತ್ತೇವೆ. ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವುದು ಕಂಪ್ಯೂಟರ್ ವಿಜ್ಞಾನದ ಒಂದು ಶಾಖೆಯಾಗಿದ್ದು ಇದು ಮಾನವನಂತೆ ವರ್ತಿಸುವ ಮಾನವನಂತೆ ಯೋಚಿಸುವ ಮತ್ತು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಬುದ್ದಿವಂತ ಯಂತ್ರಗಳನ್ನ ಅಭಿವೃದ್ಧಿ ಪಡಿಸುವುದರೊಂದಿಗೆ ವ್ಯವಹರಿಸುತ್ತದೆ ಕೃತಕ ಬುದ್ಧಿಮತ್ತೆಗೆ ಒಂದು ದೊಡ್ಡ ಸಾಧನೆಯೊಂದಿಗೆ ಅದು ಮಾನವ ದೋಷಗಳನ್ನು ಕಡಿಮೆ ಮಾಡುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಾಗೂ ಸುಂದರವಾದ ಜೀವನವನ್ನು ನಡೆಸಲು ಎಷ್ಟು ಅವಕಾಶವನ್ನು ಸಮಾಜ ನೀಡುತ್ತದೆಯೋ ಹಾಗೆ ವ್ಯಕ್ತಿ ಬೆಳೆಯಲಿಕ್ಕೆ ಸ್ವ ನಿರ್ಧಾರಗಳು ಅಷ್ಟೇ ಮುಖ್ಯವಾಗಿವೆ ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯು ಕೃತಕ ಬುದ್ಧಿವಂತಿಕೆಯಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಕೃತಕ ಬುದ್ಧಿವಂತಿಕೆ ಪ್ರಯೋಜನಗಳೆಂದರೆ ಮಾನವ ದೋಷದಲ್ಲಿ ಕಡಿತ ಅಪಾಯಗಳಿಂದ ಪಾರು ಮಾಡುವ ಸಾಧನವಾಗಿದೆ ದಿನದ 24 ಗಂಟೆಗಳ ಕಾಲ ಲಭ್ಯತೆ ಡಿಜಿಟಲ್ ಸಹಾಯ ಹೊಸ ಆವಿಷ್ಕಾರಗಳು ಪಕ್ಷಪಾತವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ ಕೆಲಸಗಳಲ್ಲಿ ಕೃತಕ ಬುದ್ಧಿವಂತಿಕೆ ಬಳಕೆ ಹೀಗೆ ಅನೇಕ ಪ್ರಯೋಜನಗಳು ಈ ಒಂದು ಕೃತಕ ಬುದ್ಧಿಗೆ ಬುದ್ಧಿವಂತಿಕೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದೆಂದು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಮಂಡನೆ ಮಾಡಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಪಿ ಆರ್ ಅಡವಿಯವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ  ಕೆ .ಎಸ್ .ಎನ್ ಅಯ್ಯಂಗಾರ್ ರವರ ವಿದ್ಯಾರ್ಥಿಗಳಿಗೆ ಜ್ಞಾನದ ಗಣಿಯಾಗಿ  ಅಚ್ಚುಮೆಚ್ಚಿನ ಶಿಕ್ಷಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದವರು ಅಷ್ಟೇ ಅಲ್ಲ ಅಯ್ಯಂಗಾರ್ ಅವರ ಗರಡಿಯಲ್ಲಿ  ಪಳಗಿದವರು ಇಂದು ದೇಶ ವಿದೇಶಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅಂತಹ ಜನ ಮೆಚ್ಚಿದ ಶಿಕ್ಷಕರನ್ನ ಸ್ಮರಿಸುವ ಕಾರ್ಯಕ್ರಮ  ಹಮ್ಮಿಕೊಂಡಿದ್ದು ಬಹಳಷ್ಟು ಸಂತಸ ತಂದಿದೆ ಎಂದು ತಮ್ಮ ಅಧ್ಯಕ್ಷೆ ನುಡಿಗಳಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಕೆ ಗಿರಿರಾಜ ಕುಮಾರ್ ಉಪ ಪ್ರಾಚಾರ್ಯರಾದ ಡಾ. ವಿ ಟಿ  ನಾಯ್ಕರ್, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಆರ್ ಆರ್ ಕುಲಕರ್ಣಿ ವ್ಯವಹಾರ ಆಡಳಿತ ಮಹಾ ವಿದ್ಯಾಲಯದ ಪ್ರಾಚಾರ್ಯ ಎಲ್ ಎಸ್ ರಶ್ಮಿ ಹಿರಿಯರಾದ ಶ್ರೀ ಕಳಸಾಪುರ ಸರ್ , ಅಂಗ ಸಂಸ್ಥೆಗಳ ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.