Oplus_131072 
ಜಿಲ್ಲೆ

ವಾಣಿಜ್ಯ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ.

Gadag - Shivanand Hiremath
Gadag: ನಗರದ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ.ವಿ.ಆರ್ ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ನ ಐ ಕ್ಯೂ ಎ ಸಿ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಗದಗ ಜಿಲ್ಲಾ ಅರಣ್ಯ ಇಲಾಖೆ ಸಹಯೋಗದಲ್ಲಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಜೂನ್ 5 ವಿಶ್ವ ಪರಿಸರ ದಿನಾಚರಣೆ  ನಿಮಿತ್ಯ ಪೂರ್ವಭಾವಿಯಾಗಿ ಎರಡು ದಿನಗಳ ಕಾಲ ಬೃಹತ್ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಂಸ್ಥೆಯ ಚೇರ್ಮನ್ ಶ್ರೀ ಆನಂದ್ ಪೋತ್ನಿಸ್ ಅವರು ಗಿಡಕ್ಕೆ ಪೂಜಾ ಕಾರ್ಯವನ್ನು ಕೈಗೊಳ್ಳುವ ಮೂಲಕ ಚಾಲನೆ ನೀಡಿ ವನ ಮಹೋತ್ಸವವು ಭಾರತದಲ್ಲಿ ವಾರ್ಷಿಕ ಒಂದು ವಾರದ ಮರ ನೆಡುವ ಹಬ್ಬವಾಗಿದ್ದು, ಇದನ್ನು ಜುಲೈ ಮೊದಲ ವಾರದಲ್ಲಿ ಆಚರಿಸಲಾಗುತ್ತದೆ ಅದರ ಪೂರ್ವ ಭಾವಿಯಾಗಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ ಗದಗ ಜಿಲ್ಲಾ ಅರಣ್ಯ ಇಲಾಖೆ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದು ಬಹಳಷ್ಟು ಸಂತಸ ತಂದಿದೆ.ವನಮಹೋತ್ಸವ ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಒಂದು ಶ್ರೇಷ್ಠ ಸಾಂಪ್ರದಾಯಿಕ ಕಾರ್ಯವಾಗಿದ್ದು ಮರಗಳನ್ನು ನೆಡುವ ಮೂಲಕ, ಪ್ರಕೃತಿಯ ಸೌಂದರ್ಯದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮತ್ತು ಕಡಿಮೆ ಮಾಡುವ, ಮರುಬಳಕೆ ಮಾಡುವ ಮತ್ತು ಮರುಬಳಕೆ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸಲು ಪರಿಸರವನ್ನು ಬೆಳೆಸುವ ಮೂಲಕ ತಾಯಿ ಭೂಮಿಯನ್ನು ಗೌರವಿಸುವ ಮತ್ತು ಪ್ರೀತಿಸುವ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ತಾವೆಲ್ಲ ಗಮನಿಸಿರುವ ಹಾಗೆ ನಮ್ಮ ಗದಗ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಾ ಇದೆ ಇದನ್ನು ಸರಿದೂಗಿಸಬೇಕಾದರೆ ನಮ್ಮ ಮನೆಯ ಅಕ್ಕ-ಪಕ್ಕ  ಸುತ್ತಮುತ್ತಲು ಇನ್ನೂ ಹೆಚ್ಚು ಹೆಚ್ಚು ಸಸಿಗಳನ್ನು ಹಚ್ಚಬೇಕು ಒಟ್ಟು ಇಂದು ನಮ್ಮ ಕ್ರೀಡಾಂಗಣದಲ್ಲಿ 600ಕ್ಕೂ ಹೆಚ್ಚು ಸಸಿಗಳನ್ನು ನೀಡುತ್ತಿರುವುದು ಸಂತಸ ತಂದಿದೆ ಇವುಗಳ ಲಾಲನೆ ಪಾಲನೆಯನ್ನು ಮಹಾವಿದ್ಯಾಲಯದ ಎನ್ ಎಸ್ ಎಸ್ ಸ್ವಯಂಸೇವಕ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ತಮ್ಮ ಮಾತುಗಳಲ್ಲಿ ಹಂಚಿಕೊಂಡರು.
 ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಎ.ಡಿ ಗೋಡೆಕಿಂಡಿಯವರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿ "ಮಹೋತ್ಸವ" ಎಂಬ ಪದಗಳು ಸಂಸ್ಕೃತ ಭಾಷೆಯಿಂದ ಬಂದಿವೆ. "ವನ" ಎಂದು ಉಚ್ಚರಿಸಬಹುದಾದ "ವ್ಯಾನ್" "ಕಾಡು"ವನ್ನು ಸೂಚಿಸುತ್ತದೆ, ಮತ್ತು "ಮಹೋತ್ಸವ" ಎಂಬುದು "ಮಹಾ" ಅಂದರೆ ಶ್ರೇಷ್ಠ ಮತ್ತು "ಉತ್ಸವ" ಅಂದರೆ ಹಬ್ಬ ಎಂದರ್ಥ. ಆದ್ದರಿಂದ "ವನ ಮಹೋತ್ಸವ"ದ ಅಕ್ಷರಶಃ ಅರ್ಥವನ್ನು "ಒಂದು ಮಹಾ ಅರಣ್ಯ-ಉತ್ಸವ" ಎಂದು ತಿಳಿಯಬಹುದು, ಇದು ಮರಗಳನ್ನು ನೆಡುವ  ವಿಷಯದೊಂದಿಗೆ ಪ್ರಪಂಚದಾದ್ಯಂತ ಭಾರತೀಯ ಸಮುದಾಯದಿಂದ ಆಚರಿಸಲ್ಪಡುವ ಒಂದು ಕಾರ್ಯಕ್ರಮವಾಗಿದೆ ಅಂತಹ ಒಂದು ಒಳ್ಳೆಯ ಕಾರ್ಯವನ್ನು ನಮ್ಮ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕ ಹಾಗೂ ಗದಗ ಜಿಲ್ಲಾ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಸ್ವಯಂಸೇವಕರು ಕೈಜೋಡಿಸಬೇಕು ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕಾಗಿ ಸಂಸ್ಥೆ ಪರವಾಗಿ ಗದಗ ಜಿಲ್ಲಾ ಅರಣ್ಯ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸಿದರು.
   ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪ  ಪ್ರಾಚಾರ್ಯರಾದ ಡಾ ವಿ ಟಿ ನಾಯ್ಕರ್, ಬಿ ಬಿ ಎ ಹಾಗೂ ಬಿ ಸಿ ಎ ಮಹಾವಿದ್ಯಾಲಯದ  ಪ್ರಾಚಾರ್ಯರಾದ ಪ್ರೊ. ಲಿಂಗರಾಜ್ ರಶ್ಮಿ, ಬಿಂಕದಕಟ್ಟಿ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ವೀರೇಂದ್ರ, ಉಪ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಸಚಿನ್ ಐ ಬಿಸ್ನಳ್ಳಿ, ಗಸ್ತು ಅರಣ್ಯ ಪಾಲಕರಾದ ವೀರೇಶ್ ಪಾಟೀಲ್, ವಾಚರ್  ಶ್ರೀ ಮಹಾಂತೇಶ್, ಶ್ರೀ  ರಾಯಸಾಬ್, ಶ್ರೀ ಚೇತನ್ ಹಾಗೂ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ  ಪ್ರೊ. ಬಿ.ಪಿ ಜೈನರ,  ಪ್ರೊ. ಶರೀಫ್ ಬೆನಕಲ್, ಆಫೀಸ್ ಸೂಪರ್ ಡೆಂಟ್ ಶ್ರೀ ಪ್ರಾಣೇಶ್ ಬೆಳ್ಳಟ್ಟಿ ದೈಹಿಕ ನಿರ್ದೇಶಕರಾದ ಶ್ರೀ ಆದಿತ್ಯ ಜೋಶಿ, ವಿದ್ಯಾರ್ಥಿ ಮುಖಂಡ ಕುಮಾರ್ ಜನಕ ರೆಡ್ಡಿ ಎಚ್. ಎನ್ ಎಸ್ ಎಸ್ ಘಟಕದ ಸ್ವಯಂಸೇವಕ ಸೇವಕಿಯರು ಈ ಒಂದು ವನಮೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.