filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.39407372, 0.7515971);sceneMode: 32768;cct_value: 0;AI_Scene: (-1, -1);aec_lux: 207.72922;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಅಸ್ಮಿತೆ ವ್ಯಾಪಾರ ಮೇಳ ವೀಕ್ಷಿಸಿದ 2ಲಕ್ಷ ಜನ!

ಬೆಳಗಾವಿ: ಮಹಿಳಾ ಸ್ವ-ಸಹಾಯ ಸಂಘಗಳ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಅಸ್ಮಿತೆ ವ್ಯಾಪಾರ ಮೇಳದ ಆರಂಭದ ನಾಲ್ಕು ದಿನಗಳಲ್ಲಿ 1.4 ಕೋಟಿ ರೂ. ವ್ಯಾಪಾರ ನಡೆದಿದೆ ಎಂದು ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.

ನಗರದ ಸರ್ದಾರ ಮೈದಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜೀವನೋಪಾಯ ಅಭಿಯಾನ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸಹಭಾಗಿತ್ವದಲ್ಲಿ ಡಿ.26ರಿಂದ ಹಮ್ಮಿಕೊಂಡಿರುವ ಆಸ್ಮಿತೆ ವ್ಯಾಪಾರ ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.

ಶಾಸಕ ಆಸೀಫ್ ಸೇಠ್ ಮಾತನಾಡಿ, ಈ ಮೇಳದ ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಮರದ ಗೊಂಬೆಗಳು, ಆಟದ ಸಾಮಾನು, ಸೀರೆ, ಖಾದಿ ಹಾಗೂ ವಿವಿಧ ಉತ್ಪನ್ನಗಳು ಲಭ್ಯವಿವೆ. ಖಾದಿ ಬಟ್ಟೆಗಳನ್ನು ಹೆಚ್ಚು ಬಳಕೆ ಮಾಡುವ ಮೂಲಕ ಖಾದಿ ಉದ್ಯಮ ಉಳಿಸಿ ಬೆಳೆಸಬೇಕು. ಸರ್ಕಾರ ಎಲ್ಲ ಉತ್ಪನ್ನಗಳಿಗೆ ಆನ್‌ಲೈನ್ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು ಎಂದರು.

ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ, ಜಿಲ್ಲಾ ಖಾದಿ ಅಭಿವೃದ್ಧಿ ಅಧಿಕಾರಿ ಸಾವಿತ್ರಿ ದಳವಾಯಿ, ಎಸ್.ಬೆಳಗೌಡ ಇತರರಿದ್ದರು.