ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜ್ಯದಲ್ಲಿ ಖಾಲಿಯಿರುವ ಗ್ರೂಪ್ "ಎ' ಮತ್ತು "ಬಿ' ವೃಂದದ ಹುದ್ದೆಗಳ ಮಾಹಿತಿ ನೀಡುವಂತೆ ನೀಡುವಂತೆ ಸರ್ಕಾರದ ಇತರೆ ಇಲಾಖೆಗಳಿಂದ ಮಾಹಿತಿ ಕೋರಿದೆ.
ಕರ್ನಾಟಕ ಗೆಜೆಡೆಟ್ ಪ್ರೊಬೇಷನರ್ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ಗ್ರೂಪ್ "ಎ' ಮತ್ತು "ಬಿ' ವೃಂದದ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಪ್ರತಿ ವರ್ಷ ನಡೆಸಬೇಕಾಗಿದೆ. ಅಲ್ಲದೆ, ಖಾಲಿಯಿರುವ ಹುದ್ದೆಗಳ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ರವಾನಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀದಲ್ಲಿ ಖಾಲಿಯಿರುವ ಹುದ್ದೆಗಳ ಪಟ್ಟಿ ಸಲ್ಲಿಸುವಂತೆ ಒಳಾಡಳಿತ, ಆರ್ಥಿಕ, ಕಂದಾಯ , ಗ್ರಾಮೀಣಾಭಿವೃದ್ಧಿ,ಆಹಾರ ಮತ್ತು ನಾಗರೀಕ ಇಲಾಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚನೆ ನೀಡಿದೆ.
2011ನೇ ಸಾಲಿನ ಹುದ್ದೆಗಳನ್ನು ಹೊರತು ಪಡಿಸಿ ಎಂದು ಸ್ಪಷ್ಟವಾಗಿ ಸೂಚಿಸಿದೆ. ಏಕೆಂದರೆ, 2011ರ ನೇಮಕಾತಿ ಪ್ರಕ್ರಿಯೆ ಇನ್ನೂ ಹೈಕೋರ್ಟ್ನಲ್ಲಿರುವುದರಿಂದ ಇದನ್ನು ಹೊರತಾಗಿ ಉಳಿದ ಹುದ್ದೆಗಳ ಮಾಹಿತಿ ನೀಡುವಂತೆ ಕೋರಿದೆ.