ಮುದ್ದೇಬಿಹಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಅಸ್ಕಿ ಫೌಂಡೇಷನ್ ಸಂಸ್ಥಾಪಕ ಸಿ.ಬಿ. ಅಸ್ಕಿ, ಕಾಮರಾಜ ಬಿರಾದಾರ, ಮಹೆಬೂಬ ಗೊಳಸಂಗಿ, ಅಮರೇಶ ಗೂಳಿ, ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ಬಬ್ಲು ಹುಣಚಗಿ ಇತರರಿದ್ದರು. 
ಜಿಲ್ಲೆ

ಅಸ್ಕಿ ಫೌಂಡೇಷನ್ ಸಮಾಜಮುಖಿ ಕಾರ್ಯ ಶ್ಲಾಘನೀಯ

ದತ್ತಾತ್ರೇಯ ಪಿ ಕುಲಕರ್ಣಿ

ಮುದ್ದೇಬಿಹಾಳ: ನೊಂದವರಿಗೆ, ಬಡವರಿಗೆ ನೆರವಾಗುವ ಅಸ್ಕಿ ಫೌಂಡೇಷನ್ ಸಮಾಜದಲ್ಲಿ ಗುರುತಿಸಿಕೊಳ್ಳಲು ಜಾತ್ಯತೀತ, ಪಕ್ಷಾತೀತ ನಿಲುವು, ನಿಸ್ವಾರ್ಥದಿಂದ ಕೂಡಿದ ಸಮಾಜಮುಖಿ ಕೆಲಸಗಳು ಕಾರಣ ಎಂದು ಕಾಂಗ್ರೆಸ್ ಮುಖಂಡ, ಫೌಂಡೇಷನ್ ಸಂಸ್ಥಾಪಕ ಸಿ.ಬಿ. ಅಸ್ಕಿ ಹೇಳಿದರು.

ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಫೌಂಡೇಷನ್ ಮತ್ತು ಗೆಳೆಯರ ಬಳಗದಿಂದ ಶನಿವಾರ ಏರ್ಪಡಿಸಿದ್ದ ವಿವಿಧ ಹುದ್ದೆಗೇರಿದ ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುತ್ತಿಗೆದಾರನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜಕೀಯದಲ್ಲೂ ಸಕ್ರಿಯನಾಗಿದ್ದೇನೆ. ಆದರೆ ಫೌಂಡೇಷನ್ ಗೆ ಮಾತ್ರ ಪಕ್ಷ, ಜಾತಿ ಹಣೆಪಟ್ಟಿ ಅಂಟಿಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ. ರಸ್ತೆ ಅಪಘಾತದಲ್ಲಿ ನಿಧನರಾದ ಕುಟುಂಬಗಳಿಗೆ, ಅನಾರೋಗ್ಯಕ್ಕೀಡಾದವರಿಗೆ, ಬಡವರಿಗೆ ೌಂಡೇಷನ್ ನೆರವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ವೈ.ಎಚ್. ವಿಜಯಕರ್ ಮಾತನಾಡಿ, ಸಮಾಜದಲ್ಲಿ ಹಲವಾರು ಫೌಂಡೇಷನ್ ಗಳು ಸರ್ಕಾರ ಮಾಡದಿರುವ ಕೆಲಸ ಮಾಡುತ್ತಿವೆ. ಅಸ್ಕಿ ಫೌಂಡೇಷನ್ ಬಸವತತ್ವದ ನಂಬಿಕೆಯೊಂದಿಗೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ಸತೀಶಕುಮಾರ ಓಸ್ವಾಲ್ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಮಾತನಾಡಿದರು.

ಸರ್ಕಾರಿ ನೌಕರರ ಸಂಘಕ್ಕೆ ಅಧ್ಯಕ್ಷರಾಗಿರುವ ಸಹಾಯಕ ಕೃಷಿ ಅಧಿಕಾರಿ ಅರವಿಂದ ಹೂಗಾರ, ರಾಜ್ಯ ಪರಿಷತ್ ಸದಸ್ಯ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ, ಖಜಾಂಚಿ ಶಿಕ್ಷಕ ಭರತೇಶ ಹೊಳಿ, ಪ್ರಧಾನ ಕಾರ್ಯದರ್ಶಿಪಿಡಿಇ ಬಿ.ಎಂ. ಸಾಗರ, ವಿಜಯಪುರ ಜಿಒಸಿಸಿ ಬ್ಯಾಂಕ್ ಅಧ್ಯಕ್ಷ ಆನಂದ ಬಿರಾದಾರ, ತಂಗಡಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ, ಢವಳಗಿ ಪಿಕೆಪಿಎಸ್ ಅಧ್ಯಕ್ಷ ರಾಜು ಗೌಡರ, ದಿ ಕರ್ನಾಟಕ ಕೋ ಆಪ್ ಬ್ಯಾಂಕಿಗೆ ನಾಮನಿರ್ದೇಶಿತರಾದ ರವಿ ಗೂಳಿ, ತೆರಿಗೆ ಸಲಹೆಗಾರ ನಾಗಭೂಷಣ ನಾವದಗಿ ಅವರನ್ನು ಸಿ.ಬಿ.ಅಸ್ಕಿ ಅವರು ಸನ್ಮಾನಿಸಿದರು.

ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಬಸನಗೌಡ ಪಾಟೀಲ, ದಾನಪ್ಪ ನಾಗಠಾಣ, ವಕೀಲರಾದ ಎಂ.ಎಚ್. ಹಾಲಣ್ಣವರ್, ಎಸ್.ಎಸ್. ಮಾಲಗತ್ತಿ , ಎಂ.ಎ. ಮುದ್ದೇಬಿಹಾಳ, ಗುರುಲಿಂಗಪ್ಪಗೌಡ ಪಾಟೀಲ, ಮಹ್ಮದರಫೀಕ್ ಶಿರೋಳ, ಅಮರೇಶ ಗೂಳಿ, ಸಂತೋಷ ನಾಯ್ಕೋಡಿ, ರಾಜು ಬಳ್ಳೊಳ್ಳಿ, ಶ್ರೀಕಾಂತ ಹಿರೇಮಠ, ಸಂಗನಗೌಡ ಪಾಟೀಲ, ಸಂಗನಗೌಡ ಬಿರಾದಾರ, ಪ್ರಭುದೇವ ಕಲಬುರ್ಗಿ, ಎಂ.ಎಸ್. ಗೌಡರ ಪಾಲ್ಗೊಂಡಿದ್ದರು.

ಸ್ಥಾಯಿ ಸಮಿತಿಯ ದೀಪಾ ರತ್ನ ಶ್ರೀಪ್ರಾರ್ಥಿಸಿದರು. ಚಂದ್ರಶೇಖರ ಕಲಾಲ ಸ್ವಾಗತಿಸಿದರು. ಶ್ರೀಶೈಲ ಹೂಗಾರ ನಿರೂಪಿಸಿದರು.