ಜಿಲ್ಲೆ

ವೇಷಭೂಷಣ ಸ್ಪರ್ಧೆಯಲ್ಲಿ ಅಶ್ವಿತಾ ಮೊದಲು

Dharwad

ಧಾರವಾಡ: ನಗರದ ಸುದಿಶಾ ಇವೆಂಟ್ಸ್ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ನಗರದ ಅಶ್ವಿತಾ ಕಳಸದ (ಮೊದಲ), ಋತು ಸಜ್ಜನ, ಸಾಯಿ ದಕ್ಷ ಕದಂ (ಎರಡನೇ), ಪ್ರಿಯಂವದಾ ಮಾನವಾಚಾರ ಹಾಗೂ ಸಿಂಚನಾ ಕದಮನವರ (ಮೂರನೇ) ಸ್ಥಾನ ಪಡೆದಿದ್ದಾರೆ ಎಂದು ಸುದಿಶಾ ಇವೆಂಟ್ಸ್ ಅಧ್ಯಕ್ಷ ರಾಘವೇಂದ್ರ ಕುಂದಗೋಳ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಆನ್​ಲೈನ್ ಕ್ಲಾಸ್​ಗಳಿಂದ ಬೇಸತ್ತಿದ್ದರು. ಹೀಗಾಗಿ ಮಕ್ಕಳ ಮನರಂಜನೆಗಾಗಿ ಕಳೆದ ತಿಂಗಳು ಅಜ್ಜ, ಅಜ್ಜಿಯರ ವೇಷಭೂಷಣ ಸ್ಪರ್ಧೆಯನ್ನು ಆನ್​ಲೈನ್ ಮೂಲಕ ನಡೆಸಲಾಗಿತ್ತು ಎಂದರು.

ನಿರ್ಣಾಯಕರಾಗಿ ಕೆ. ವಂದನಾ ಮುಳಗುಂದಮಠ, ಮಾರ್ತಾಂಡಪ್ಪ ಕತ್ತಿ ಕಾರ್ಯ ನಿರ್ವಹಿಸಿದ್ದರು. ಲಾಕ್​ಡೌನ್ ಅವಧಿಯಲ್ಲಿ ಮಕ್ಕಳಿಗೆ ಅನೇಕ ಸ್ಪರ್ಧೆಗಳನ್ನು ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದೆವು ಎಂದರು. ಮಂಜುಳಾ ರಾಮಡಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.