ಜಿಲ್ಲೆ

5 ರಂದು ಅಶ್ವತ್ಥಾಮನ್ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ಸಂಚಲನ ಮೈಸೂರು ತಂಡದ ವತಿಯಿಂದ ಆ.5 ರಂದು ಸಂಜೆ 6.30ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಬಿ.ಎಂ.ಶ್ರೀ. ಅವರ ‘ಅಶ್ವತ್ಥಾಮನ್’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರಂಗಕರ್ಮಿ ರವಿ ಮೂರೂರು ತಿಳಿಸಿದರು.


ನಾಟಕವನ್ನು ಮಧು ಮಳವಳ್ಳಿ ನಿರ್ದೇಶಿಸಿದ್ದಾರೆ. ಮೂಲ ಕೃತಿಯನ್ನು ಡಾ.ಪಿ.ವಿ.ನಾರಾಯಣ ಹೊಸ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇದು ಸಾಪೋಕ್ಲೀಸನ ಏಜಾಕ್ಸ್ ಅಥವಾ ಆಯಾಸ್‌ನ ರೂಪಾಂತರವೆಂದು ಕರೆಯಲಾಗುತ್ತದೆ. ನಾಟಕದ ಸನ್ನಿವೇಶದ ಮಟ್ಟಿಗೆ ಪಾತ್ರಗಳು ನೈಜವಾಗಿರಲಿದ್ದು, ನಾಟಕದ ಸತ್ವ ಅನುವಾದವೇ ಆಗಿದೆ. ಹೀಗಾಗಿ ಎಲ್ಲ ರೀತಿಯಲ್ಲೂ ನಾಟಕ ಪ್ರೇಕ್ಷರನ್ನು ಹಿಡಿದಿಡಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಂಗಕರ್ಮಿಗಳಾದ ದೀಪಕ್ ಮೈಸೂರು, ರಾಜಶೇಖರ ಕದಂಬ, ಡಾ.ಶಾಂಭವಿಸ್ವಾಮಿ ಇದ್ದರು.