- ಈ ಸರ್ಕಾರ ವಿಸ್ಕಿ, ಬ್ರಾಂದಿ, ರಮ್ ಕೊಡೋದು...ನೀರು ಕೊಡೋ ಸರ್ಕಾರ ಬಿಜೆಪಿ
ಮಂಡ್ಯ: ಕುಡಿಯಲು ಕಾವೇರಿ ನೀರು ಕೊಡಿ ಎಂದರೆ ವಿಸ್ಕಿ, ಬ್ರಾಂದಿ ಕೊಡುತ್ತೇವೆ ಎನ್ನುತ್ತಾರೆ. ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡ್ತಾರೆ.ಈ ಸರ್ಕಾರ ವಿಸ್ಕಿ, ಬ್ರಾಂಡಿ, ರಮ್ ಕೊಡೋ ಸರ್ಕಾರ. ನೀರು ಕೊಡೋ ಸರ್ಕಾರ ಬಿಜೆಪಿ ಎಂದು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಡವಟ್ಟು ಮಾಡಿದೆ. ಬಿಜೆಪಿ ರೈತರ ಪರವಾಗಿ ಹೋರಾಟ ಮಾಡುತ್ತಿದೆ. ಇಂದು ಮಂಡ್ಯ ರೈತರ ಟ್ರೇಡ್ ಮಾರ್ಕ್ ಆಗಿರೋ ಪಟಾಪಟಿ ಚಡ್ಡಿ ಧರಿಸಿ ಪ್ರತಿಭಟನೆ ಮಾಡ್ತಾ ಇದ್ದೇವೆ. ತಮಿಳುನಾಡಿಗೆ ಬಿಡುತ್ತಿರೋ ನೀರು ನಿಲ್ಲಿಸಬೇಕು.ಈ ಹೋರಾಟ ತೀವ್ರತನಕ್ಕೆ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕುರ್ಚಿಯನ್ನು ಉಳಿಸಿಕೊಳ್ಳಲು ರೈತರನ್ನು ಬಲಿ ಕೊಡುತ್ತಾ ಇದ್ದೀರಾ?. ನಿಮ್ಮ ಬಲಿಯಾಗಬೇಕು ಹೊರೆತು, ರೈತರನ್ನು ಅಲ್ಲ. ನೀರನ್ನು ಬಿಡಲ್ಲ ಎಂದು ಹೇಳಿದವರು ಅಧಿಕಾರ ಹೊರಟು ಹೋಗುತ್ತೆ ಎಂದು ನೀರು ಬಿಡುತ್ತಾ ಇದ್ದಾರೆ. ತಮಿಳುನಾಡಿನವರಿಗೆ ಎರಡನೇ ಬೆಳೆ ಕೊಡುತ್ತಾ ಇದ್ದಾರೆ. ನಮ‌್ಮ ಒಂದು ಬೆಳಗೆ ನೀರಿಲ್ಲ. ತಮಿಳುನಾಡಿನವರು ಮೂರು ಬೆಳೆ ಬೆಳೆಯಬಹುದು. ನಾವು ಒಂದು ಬೆಳೆ ಬೆಳೆಯಬಾರದ? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಪೆನ್ನು ಪೇಪರ್ ಕೊಟ್ಟರೆ ಇವರಿಗೆ ಏನು ಬೇಕು ಅದನ್ನು ಬರೆದುಕೊಳ್ಳುತ್ತಿದ್ದಾರೆ. ಕಾವೇರಿ ನೀರು ಕುಡಿಯಲು ಕೊಡಿ ಎಂದರೆ ವಿಸ್ಕಿ, ಬ್ರಾಂದಿ ಕೊಡುತ್ತೇವೆ ಎನ್ನುತ್ತಾರೆ. ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡ್ತಾರೆ.ಈ ಸರ್ಕಾರ ವಿಸ್ಕಿ, ಬ್ರಾಂದಿ, ರಮ್ ಕೊಡೋ ಸರ್ಕಾರ. ನೀರು ಕೊಡೋ ಸರ್ಕಾರ ಬಿಜೆಪಿ ಎಂದು ಆಢಳಿತ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಸೆಟೆಲ್‌ಮೆಂಟ್ ಮಾಡಿದೀವಿ ಅಂತಾ ಹೇಳುತ್ತಾರೆ. ಏನ್ ಸೆಟೆಲ್‌ಮೆಂಟ್ ಮಾಡಿದ್ದಾರೆ ಇವರು?.ಕೇವಲ ವಿಸ್ಕಿ, ಬ್ರಾಂದಿ, ರಮ್ ಕುಡಿಸುತ್ತಿದ್ದಾರೆ ಅಷ್ಟೇ. ಇವರ ಚಡ್ಡಿ ಇಳಿಸಿ, ಅಧಿಕಾರದಿಂದ ಇಳಿಸುವ ಶಕ್ತಿ ಮಂಡ್ಯಗೆ ಇದೆ.ಇದಕ್ಕೆ ಇಂದಿನ ಚಡ್ಡಿ ಮೆರವಣಿಗೆಯೇ ಸಾಕ್ಷಿ ಎಂದು ಹೇಳಿದ್ದಾರೆ.