ಕೆಜಿಎಫ್- ನಗರದ ಸುಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ವಿಗ್ರಹದಲ್ಲಿ ಅಷ್ಟಬಂಧನ ಬಿರುಕು ವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರ ಮೂಲ ವಿಗ್ರಹಕ್ಕೆ ಪ್ರತಿಷ್ಠಾಪನೆ ಸಮಯದಲ್ಲಿ ಅಳವಡಿಸಿದ್ದ ಅಷ್ಟಬಂಧನ ಬಿರುಕು ಬಿಟ್ಟಿದ್ದು, ಕೂಡಲೇ ಅಷ್ಟ ಬಂಧನ ಜೀಣೋರ್ದ್ಧಾರ ಮಹಾ ಸಂಒಪ್ರೋಕ್ಷಣಾ ಕಾರ್ಯ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುಜರಾಯಿ ಇಲಾಖೆ ಆಯುಕ್ತರು ಕ್ರಮ ವಹಿಸಲು ಸೂಚಿಸಿ ತಿಂಗಳು ಕಳೆದರೂ ಇದುವರೆಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದೇ ರ್ನಿಲಕ್ಷ$್ಯ ವಹಿಸಿದ್ದಾರೆ. ದೇವರ ಮೂಲ ವಿಗ್ರಹದ ಕೆಳಗೆ ಅಳವಡಿಸಿದ್ದ ಅಷ್ಟಬಂಧನ ಬಿರುಕು ಬಿಟ್ಟಿರುವುದರಿಂದ ದೇವರಿಗೆ ಅಭಿಷೇಕ ಮಾಡಿದಾಗ ಸೂಕ್ಷ$್ಮವಾದ ಚಿಕ್ಕ ಚಿಕ್ಕ ಹುಳುಗಳು ವಿಗ್ರಹದ ಕೆಳಗಿನಿಂದ ಬರುತ್ತಿರುವುದರಿಂದ ಪೂಜಾ ಕಾರ್ಯ ನೆರವೇರಿಸಲು ಸಾಧ್ಯವಾಗದ ಪರಿಸ್ಥಿತಿ ನಿಮಾರ್ಣವಾಗಿದೆ.
ಅಷ್ಟಬಂಧನ ಜೀಣೋರ್ದ್ಧಾರ ಮಹಾ ಸಂಪ್ರೋಕ್ಷಣೆ ನೆರವೇರಿಸಲು ಕಳೆದ 2024ರ ಜು.22ರಂದು ದೇವಾಲಯದ ಪ್ರಧಾನ ಅರ್ಚಕರು ಇಒ ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ಶ್ರೀವಾರಿ ಸೇವಕ ಹಾಗೂ ಹಿಂದುಳಿದ ಒಕ್ಕೂಟದ ಕಾರ್ಯದರ್ಶಿ ಬಾಬು ಶೇಷಯ್ಯ ಅವರು 2025ರ ಜ.6ರಂದು ಜಿಲ್ಲಾಧಿಕಾರಿಗೆ ಹಾಗೂ ಮುಜರಾಯಿ ಆಯುಕ್ತರಿಗೆ ದೂರು ನೀಡಿದ್ದರು. ಬಾಬು ಶೇಷಯ್ಯ ಅವರ ದೂರು ಆಧರಿಸಿ ಡಿಸಿ ಕಚೇರಿಯಿಂದ ಫೆ.27 ರಂದು ಆಯುಕ್ತರಿಗೆ ಪತ್ರ ವ್ಯವಹಾರ ನಡೆದಿದೆ. ಆಯುಕ್ತರ ಕಚೇರಿಯಿಂದ ಈ ಅರ್ಜಿ ಪರಿಶೀಲಿಸಿ, ಆಗಮ ಪಂಡಿತರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಬಳಿಕ ಏ.19ರಂದು ರಾಜ್ಯ ಆಗಮ ಪಂಡಿತರು ದೇವಸ್ಥಾನದ ಸ್ಥಿತಿಗತಿ ಪರಿಶೀಲಿಸಿ ಕೂಡಲೆ ಅಷ್ಟಬಂಧನ ನೂತನವಾಗಿ ಅಳವಡಿಸಿ ದೇವಾಲಯದ ಮಹಾ ಸಂಪ್ರೋಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಆಗಮ ಪಂಡಿತರು ನೀಡಿರುವ ವರದಿಯನ್ನು ಆಯುಕ್ತರು ಸೂಕ್ಷ$್ಮವಾಗಿ ಪರಿಶೀಲಿಸಿ ಮೇ 15 ರಂದು ಸದರಿ ಪೂಜೆ ಕೂಡಲೆ ಕೈಗೊಳ್ಳುವಂತೆ ಆದೇಶ ನೀಡಿ ತಿಂಗಳ ಕಳೆದರೂ ದೇವಾಲಯದ ಇಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಾಬು ಶೇಷಯ್ಯ ದೂರಿದ್ದಾರೆ.